ಮುಂಬೈ: ಐಪಿಎಲ್ ನಲ್ಲಿ ಅವಕಾಶ ಪಡೆಯಲು ಆಸ್ಟ್ರೇಲಿಯಾ ಕ್ರಿಕೆಟಿಗರು ಕೊಹ್ಲಿ ಜತೆ ನಯವಾಗಿ ನಡೆದುಕೊಳ್ಳಲು ಆರಂಭಿಸಿದರು ಎಂಬ ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿಕೆ ಬಗ್ಗೆ ಟೀಂ ಇಂಡಿಯಾ ದಿಗ್ಗಜರಾದ ವಿವಿಎಸ್ ಲಕ್ಷ್ಮಣ್ ಮತ್ತು ಕೆ. ಶ್ರೀಕಾಂತ್ ಕಿಡಿ ಕಾರಿದ್ದಾರೆ.
ಯಾವುದೇ ಐಪಿಎಲ್ ಫ್ರಾಂಚೈಸಿಗಳು ಭಾರತೀಯ ಆಟಗಾರನ ಜತೆ ಹೇಗೆ ನಡೆದುಕೊಂಡಿದ್ದೀರಿ ಎಂಬ ಆಧಾರದಲ್ಲಿ ಅವಕಾಶ ನೀಡುವುದಿಲ್ಲ. ತಮಗೆ ಉತ್ತಮ ಫಲಿತಾಂಶ ನೀಡಬಲ್ಲ ಸಾಮರ್ಥ್ಯವುಳ್ಳ ಆಟಗಾರನನ್ನು ನೋಡಿಕೊಂಡು ಆಯ್ಕೆ ಮಾಡುತ್ತದೆ ಎಂದು ವಿವಿಎಸ್ ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ.
ಕೆ ಶ್ರೀಕಾಂತ್ ಕೂಡಾ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ‘ಎದುರಾಳಿಯನ್ನು ಸ್ಲೆಡ್ಜ್ ಮಾಡಿದ ಮಾತ್ರಕ್ಕೆ ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ಆಸ್ಟ್ರೇಲಿಯನ್ನರು ಸೋತಿದ್ದರೆ ಅದು ಸೋಲೇ. ಅದಕ್ಕೆ ಸ್ಲೆಡ್ಜಿಂಗ್ ಕಾರಣದಿಂದಲ್ಲ’ ಎಂದಿದ್ದಾರೆ.