Publish Date: Fri, 10 Apr 2020 (09:36 IST)
Updated Date: Fri, 10 Apr 2020 (09:37 IST)
ಸಿಡ್ನಿ: ಐಪಿಎಲ್ ಗಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಸ್ಲೆಡ್ಜಿಂಗ್ ಮಾಡುವುದನ್ನೇ ಬಿಟ್ಟರು ಎಂಬ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿಕೆಗೆ ಹಾಲಿ ನಾಯಕ ಟಿಮ್ ಪೇಯ್ನ್ ತಿರುಗೇಟು ನೀಡಿದ್ದಾರೆ.
ನಾವು ಯಾರೂ ಕೊಹ್ಲಿ ಜತೆ ಐಪಿಎಲ್ ಗಾಗಿ ನಯವಾಗಿ ನಡೆದುಕೊಂಡಿರಲಿಲ್ಲ. ಐಪಿಎಲ್ ಗುತ್ತಿಗೆ ಪಡೆಯಲು ಅವರ ಜತೆ ನಯವಾಗಿ ನಡೆದುಕೊಂಡಿದ್ದು ಯಾರು ಎಂದೂ ನನಗೆ ಗೊತ್ತಿಲ್ಲ. ಅವರನ್ನು ಕೆಣಕಿದರೆ ಮತ್ತಷ್ಟು ತಿರುಗಿ ಬೀಳುತ್ತಾರೆ ಎಂದು ಸೈಲೆಂಟ್ ಆಗಿದ್ದೆವು ಎಂದು ಪೇಯ್ನ್ ಹೇಳಿಕೊಂಡಿದ್ದಾರೆ.
ಯಾವುದೇ ಆಟಗಾರರನ್ನು ಕೆಣಕಿದಷ್ಟು ಆತ ಮತ್ತಷ್ಟು ಕೆರಳಿ ತಿರುಗಿ ಬೀಳಲು ನೋಡುತ್ತಾನೆ. ಕೊಹ್ಲಿ ವಿಚಾರದಲ್ಲೂ ಇದೇ ಕಾರಣಕ್ಕೆ ನಾವು ಹಾಗೆ ನಡೆದುಕೊಂಡಿದ್ದೆವು ಎಂದು ಪೇಯ್ನ್ ಹೇಳಿಕೊಂಡಿದ್ದಾರೆ.