ಲಂಡನ್: ವಿಸ್ಡನ್ ಲೀಡಿಂಗ್ ಕ್ರಿಕೆಟರ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ನಂ.1 ಸ್ಥಾನಕ್ಕೇರಿದ್ದಾರೆ.
ಈ ಮೂಲಕ ಆಂಡ್ರ್ಯೂ ಫ್ಲಿಂಟಾಫ್ ಬಳಿಕ ವಿಸ್ಡನ್ ಪಟ್ಟಿಯಲ್ಲಿ ಸ್ಥಾನ ಪಡೆದ ದ್ವಿತೀಯ ಆಟಗಾರರಾಗಿದ್ದಾರೆ. ಮಹಿಳಾ ಕ್ರಿಕೆಟಿಗರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಆಲ್ ರೌಂಡರ್ ಎಲ್ಸಿ ಪೆರ್ರಿ ನಂ.1 ಸ್ಥಾನದಲ್ಲಿದ್ದಾರೆ.
ವಿಶೇಷವೆಂದರೆ ಕೊಹ್ಲಿ 2016 ರಿಂದ 2018 ರವರೆಗಿನ ಸಾಧನೆಯ ಆಧಾರದ ಮೇಲೆ ಸತತವಾಗಿ ಮೂರು ವರ್ಷ ನಂ.1 ಸ್ಥಾನದಲ್ಲಿದ್ದರು. ಸ್ಟೋಕ್ಸ್ 2019 ರಲ್ಲಿ ಮಾಡಿದ ಸಾಧನೆ ಪರಿಗಣಿಸಿ ನಂ.1 ಸ್ಥಾನಕ್ಕೇರಿದ್ದಾರೆ.