Select Your Language

Notifications

webdunia
webdunia
webdunia
webdunia

ಮನೆಯ ಬಳಿಯೇ ಹಸಿವಿನಿಂದ ಜ್ಞಾನ ತಪ್ಪಿ ಬಿದ್ದಿದ್ದ ವ್ಯಕ್ತಿಯ ಕತೆ ಹೇಳಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಮನೆಯ ಬಳಿಯೇ ಹಸಿವಿನಿಂದ ಜ್ಞಾನ ತಪ್ಪಿ ಬಿದ್ದಿದ್ದ ವ್ಯಕ್ತಿಯ ಕತೆ ಹೇಳಿದ ಕ್ರಿಕೆಟಿಗ ಮೊಹಮ್ಮದ್ ಶಮಿ
ಕೋಲ್ಕೊತ್ತಾ , ಬುಧವಾರ, 15 ಏಪ್ರಿಲ್ 2020 (09:46 IST)
ಕೋಲ್ಕೊತ್ತಾ: ಲಾಕ್ ಡೌನ್ ನಿಂದಾಗಿ ಎಷ್ಟೋ ಬಡವರು ಊಟೋಪಚಾರವಿಲ್ಲದೇ ಹಸಿವಿನಿಂದ ಕಂಗೆಟ್ಟಿದ್ದಾರೆ. ಅಂತಹದ್ದೇ ವ್ಯಕ್ತಿಯ ಧಾರುಣ ಕತೆಯನ್ನು ಕ್ರಿಕೆಟಿಗ ಮೊಹಮ್ಮದ್ ಶಮಿ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಹಂಚಿಕೊಂಡಿದ್ದಾರೆ.


ಯಜುವೇಂದ್ರ ಚಾಹಲ್ ಜತೆಗಿನ ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ನಲ್ಲಿ ಮೊಹಮ್ಮದ್ ಶಮಿ ರಾಜಸ್ಥಾನದಿಂದ ಬಿಹಾರದ ಕಡೆಗೆ ತೆರಳುತ್ತಿದ್ದ ಬಡ ವ್ಯಕ್ತಿಯೊಬ್ಬ ಹಸಿವಿನಿಂದಾಗಿ ನಮ್ಮ ಮನೆಯ ಸಮೀಪವೇ ಕುಸಿದು ಬಿದ್ದಿದ್ದ. ಇದು ನನಗೆ ಸಿಸಿಟಿವಿ ಕ್ಯಾಮರಾ ಮೂಲಕ ಗೊತ್ತಾಯಿತು.

ತಕ್ಷಣವೇ ಹೊರಬಂದು ಆತನಿಗೆ ಆಹಾರ, ನೀರು ನೀಡಿದೆ. ನನ್ನಿಂದ ಸಾಧ‍್ಯವಾದಷ್ಟು ಆತನಿಗೆ ಸಹಾಯ ಮಾಡಿದೆ. ಈತನಂತೆ ಎಷ್ಟೋ ವಲಸೆಗಾರರು ಬವಣೆ ಪಡುತ್ತಿದ್ದಾರೆ’ ಎಂದು ಶಮಿ ಬೇಸರದಿಂದಲೇ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖಾಲಿ ಮೈದಾನದಲ್ಲಿ ಕೊಹ್ಲಿ ಏನು ಮಾಡಬಹುದು ಎಂಬ ಕುತೂಹಲ ಈ ಆಸೀಸ್ ಕ್ರಿಕೆಟಿಗನಿಗೆ