Publish Date: Mon, 13 Apr 2020 (09:49 IST)
Updated Date: Mon, 13 Apr 2020 (09:51 IST)
ಮುಂಬೈ: ಕೊರೋನಾವೈರಸ್ ನಿಂದಾಗಿ ಈ ವರ್ಷದ ಐಪಿಎಲ್ ನ್ನು ಏಪ್ರಿಲ್ 15 ರವರೆಗೆ ಮುಂದೂಡಲಾಗಿತ್ತು. ಆದರೆ ಈಗ ಗಡುವು ಮುಗಿಯುತ್ತಾ ಬಂದರೂ ಪರಿಸ್ಥಿತಿ ಸುಧಾರಿಸಿಲ್ಲ. ಹೀಗಾಗಿ ಐಪಿಎಲ್ ಅನಿಶ್ಚಿತತೆಯಲ್ಲಿದೆ.
ಕೆಲವು ರಾಜ್ಯಗಳು ಈಗಾಗಲೇ ಏಪ್ರಿಲ್ 30 ರವರೆಗೂ ಲಾಕ್ ಡೌನ್ ವಿಸ್ತರಿಸಿವೆ. ಭಾರತದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹೀಗಾಗಿ ಐಪಿಎಲ್ ನಡೆಸಬೇಕೋ ಬೇಡವೋ ಎಂಬ ಸಂದಿಗ್ಧತೆಯಲ್ಲಿ ಬಿಸಿಸಿಐ ಇದೆ.
ಕೇಂದ್ರ ಸರ್ಕಾರ ಇದುವರೆಗೆ ದೇಶವಿಡೀ ಲಾಕ್ ಡೌನ್ ಮಾಡುವ ಬಗ್ಗೆ ಆದೇಶ ಹೊರಡಿಸಿಲ್ಲ. ಹೀಗಾಗಿ ಲಾಕ್ ಡೌನ್ ಬಗ್ಗೆ ಕೇಂದ್ರದ ತೀರ್ಮಾನ ನೋಡಿಕೊಂಡು ಐಪಿಎಲ್ ನಡೆಸಬೇಕೋ ಬೇಡವೋ ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ಬಿಸಿಸಿಐ ಮೂಲಗಳು ಹೇಳಿವೆ.