Publish Date: Tue, 02 Mar 2021 (09:50 IST)
Updated Date: Tue, 02 Mar 2021 (09:52 IST)
ಅಹಮ್ಮದಾಬಾದ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದು ಆಗಾಗ ವರದಿಯಾಗುತ್ತಿದೆ. ಆದರೆ ಇದೇ ವಿಷಯವನ್ನಿಟ್ಟುಕೊಂಡು ನೆಟ್ಟಿಗರು ಈಗ ಇಬ್ಬರನ್ನೂ ಟ್ರೋಲ್ ಮಾಡಿದ್ದಾರೆ.
ರೋಹಿತ್, ಕೊಹ್ಲಿ ಅಹಮ್ಮದಾಬಾದ್ ನಲ್ಲಿ ನಿನ್ನೆ ಅಭ್ಯಾಸದ ವೇಳೆ ಜೊತೆಯಾಗಿ ಅಕ್ಕಪಕ್ಕದ ಕುರ್ಚಿಯಲ್ಲಿ ಕೂತು ಮಾತನಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೇಳೆ ವಿರಾಟ್ ಕೈಯಲ್ಲಿ ನೀರಿನ ಬಾಟಲಿ ಹಿಡಿದಿದ್ದರೆ, ರೋಹಿತ್ ಅವರತ್ತ ನೋಡುತ್ತಿದ್ದಾರೆ. ಈ ಫೋಟೋ ನೋಡಿ ನೆಟ್ಟಿಗರು ಇಬ್ಬರ ನಡುವೆ ಎಂಥಾ ವೈಮನಸ್ಯವಿದೆಯೆಂದರೆ ವಿರಾಟ್, ರೋಹಿತ್ ಗೆ ನೀರಿನ ಬಾಟಲಿಯನ್ನೂ ಶೇರ್ ಮಾಡಲ್ಲ ಎಂದು ತಮಾಷೆ ಮಾಡಿದ್ದಾರೆ.