Publish Date: Mon, 01 Mar 2021 (09:25 IST)
Updated Date: Mon, 01 Mar 2021 (09:26 IST)
ದುಬೈ: ಐಸಿಸಿ ಬಿಡುಗಡೆಗೊಳಿಸಿರುವ ಲೇಟೆಸ್ಟ್ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಡ್ತಿ ಪಡೆದಿದ್ದಾರೆ.
ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಅಗ್ರ 10 ರೊಳಗೆ ಸ್ಥಾನ ಪಡೆದಿರುವ ರೋಹಿತ್ 742 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಇದು ಅವರ ಜೀವನ ಶ್ರೇಷ್ಠ ಸಾಧನೆ. ಇವರಲ್ಲದೆ ನಾಯಕ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನು, ಬೌಲರ್ ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಇವರಲ್ಲದೆ ಭಾರತೀಯರ ಪೈಕಿ ಜಸ್ಪ್ರೀತ್ ಬುಮ್ರಾ 9 ನೇ ಸ್ಥಾನದಲ್ಲಿದ್ದಾರೆ.