Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಐಸಿಸಿ ಭಾರತದ ಕೈಗೊಂಬೆ, ಹಲ್ಲಿಲ್ಲದ ಹಾವು: ಮೈಕಲ್ ವಾನ್ ಕಿಡಿ

webdunia
  • facebook
  • twitter
  • whatsapp
share
ಶನಿವಾರ, 27 ಫೆಬ್ರವರಿ 2021 (10:07 IST)
ಮುಂಬೈ: ಐಸಿಸಿ ಎಂದರೆ ಭಾರತದ ಕೈಗೊಂಬೆ. ಅದು ಹಲ್ಲಿಲ್ಲದ ಹಾವು.. ಹೀಗೆಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಟೀಕಾಪ್ರಹಾರ ನಡೆಸಿದ್ದಾರೆ.


ಅಹಮ್ಮದಾಬಾದ್ ಟೆಸ್ಟ್ ಪಂದ್ಯದ ಪಿಚ್ ಬಗ್ಗೆ ಟೀಕೆ ಮಾಡಿರುವ ಅವರು ಹಲ್ಲಿಲ್ಲದ ಹಾವಾಗಿರುವ ಐಸಿಸಿ ಭಾರತದಂತಹ ಪ್ರಭಾವಿ ಕ್ರಿಕೆಟ್ ರಾಷ್ಟ್ರಗಳು ಹೇಳಿದಂತೆ ಕೇಳುವ ಹಲ್ಲಿಲ್ಲದ ಹಾವಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ‘ತವರಿನ ಕ್ರಿಕೆಟ್ ಬೋರ್ಡ್ ಗಳು ಕಳಪೆ ಪಿಚ್ ನಿರ್ಮಿಸಿದರೂ ಐಸಿಸಿ ಮಾತಾಡಲ್ಲ. ಇದರಿಂದ ಎರಡೇ ದಿನಕ್ಕೆ ಆಟ ಮುಗಿಯುತ್ತಿದೆ. ನೇರಪ್ರಸಾರಕರೂ ನಷ್ಟಪರಿಹಾರ ಕೇಳುವಂತಾಗಬೇಕು. ಕಳೆದ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆದ್ದಿರಬಹುದು. ಆದರೆ ಅಲ್ಲಿ ನಿಜವಾಗಿಯೂ ಯಾರೂ ಗೆಲುವು ಕಂಡಿರಲಿಲ್ಲ’ ಎಂದು ವಾನ್ ಟೀಕಾಪ್ರಹಾರ ನಡೆಸಿದ್ದಾರೆ.

Share this Story:
  • facebook
  • twitter
  • whatsapp

Follow Webdunia Hindi

ಮುಂದಿನ ಸುದ್ದಿ

webdunia
ಇಂಗ್ಲೆಂಡ್ ಕ್ರಿಕೆಟಿಗರಿಗೆ ಮಹಿಳೆಯರಿಂದ ಅವಮಾನ