Publish Date: Fri, 26 Feb 2021 (09:34 IST)
Updated Date: Fri, 26 Feb 2021 (09:35 IST)
ಅಹಮ್ಮದಾಬಾದ್: ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ನಡುವೆ ಅಭಿಮಾನಿಯೊಬ್ಬ ಭದ್ರತೆ ಮುರಿದು ವಿರಾಟ್ ಕೊಹ್ಲಿಯತ್ತ ನುಗ್ಗಿದ ಘಟನೆ ನಡೆದಿದೆ.
ಒಂದು ವೇಳೆ ಅಭಿಮಾನಿ ಕೊಹ್ಲಿಯ ಬಳಿ ಬಂದಿದ್ದರೆ ಜೈವಿಕ ಸುರಕ್ಷಾ ವಲಯ ಮುರಿದಿದ್ದರಿಂದ ಕೊಹ್ಲಿ ಕ್ವಾರಂಟೈನ್ ಗೆ ಹೋಗಬೇಕಿತ್ತು. ಆದರೆ ಅಭಿಮಾನಿ ಬರುತ್ತಿರುವುದನ್ನು ದೂರದಿಂದಲೇ ಗಮನಿಸಿದ ಕೊಹ್ಲಿ ದೂರ ಹೋಗುವಂತೆ ಸನ್ನೆ ಮಾಡಿದರು. ಕೊಹ್ಲಿಯ ಮಾತಿಗೆ ಬೆಲೆಗೊಟ್ಟು ಆತ ಹಿಂದೆ ಸರಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಗುಜರಾತ್ ಕ್ರಿಕೆಟ್ ಸಂಸ್ಥೆ ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಲಿದೆ.