Publish Date: Mon, 01 Mar 2021 (08:48 IST)
Updated Date: Mon, 01 Mar 2021 (08:50 IST)
ಅಹಮ್ಮದಾಬಾದ್: ವೈಯಕ್ತಿಕ ಕಾರಣ ನೀಡಿ ಜಸ್ಪ್ರೀತ್ ಬುಮ್ರಾ ತಂಡದಿಂದ ಹೊರನಡೆದ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಈಗ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಡುವವರು ಯಾರು ಎಂಬ ಪ್ರಶ್ನೆ ಶುರುವಾಗಿದೆ.
ಮೂಲಗಳ ಪ್ರಕಾರ ಬುಮ್ರಾ ಸ್ಥಾನಕ್ಕೆ ಉಮೇಶ್ ಯಾದವ್ ಅಥವಾ ಹಾರ್ದಿಕ್ ಪಾಂಡ್ಯಗೆ ಅವಕಾಶ ಸಿಗಬಹುದು. ಅಂತಿಮ ಟೆಸ್ಟ್ ಬ್ಯಾಟಿಂಗ್ ಗೆ ಅನುಕೂಲಕರವೆಂದು ಹೇಳಲಾಗುತ್ತಿದೆ. ಹೀಗಾಗಿ ಉಮೇಶ್ ಯಾದವ್ ಗೆ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ. ಇಬ್ಬರೂ ಇದುವರೆಗೆ ಇಂಗ್ಲೆಂಡ್ ವಿರುದ್ಧ ಈ ಸರಣಿಯಲ್ಲಿ ಒಂದೇ ಒಂದು ಪಂದ್ಯವಾಡಿಲ್ಲ. ಇನ್ನೊಬ್ಬ ಯುವ ವೇಗಿ ಮೊಹಮ್ಮದ್ ಸಿರಾಜ್ ಇದ್ದರೂ ಹಿರಿಯರಿಗೆ ಮಣೆ ಹಾಕುವ ಸಾಧ‍್ಯತೆ ಹೆಚ್ಚು. ಹೀಗಾಗಿ ಪಾಂಡ್ಯ ವರ್ಸಸ್ ಯಾದವ್ ಎಂಬಂತಾಗಿದೆ.
Krishnaveni K
Publish Date: Mon, 01 Mar 2021 (08:48 IST)
Updated Date: Mon, 01 Mar 2021 (08:50 IST)