Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಮನೆಯಲ್ಲಿ ಸಾವಿನ ಸುದ್ದಿ! ಆಘಾತದಲ್ಲಿರುವ ಕೊಹ್ಲಿ

ವಿರಾಟ್ ಕೊಹ್ಲಿ ಮನೆಯಲ್ಲಿ ಸಾವಿನ ಸುದ್ದಿ! ಆಘಾತದಲ್ಲಿರುವ ಕೊಹ್ಲಿ
ಮುಂಬೈ , ಬುಧವಾರ, 6 ಮೇ 2020 (09:09 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನೆಯಲ್ಲೀಗ ಸಾವಿನ ಸೂತಕ ಆವರಿಸಿದೆ. ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಇರುವ ಕೊಹ್ಲಿಗೆ ಸಾವಿನ ಶಾಕ್ ಸಿಕ್ಕಿದೆ.


ಕೊಹ್ಲಿಗೆ ಈ ಆಘಾತ ತಂದಿಕ್ಕಿರುವುದು ಅವರ ಮೆಚ್ಚಿನ ನಾಯಿ ಬ್ರೂನೋ. ಬ್ರೂನೋ ಸಾವನ್ನಪ್ಪಿರುವ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಕೊಹ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷವೆಂದರೆ ಈ ನಾಯಿ 11 ವರ್ಷದಿಂದ ಕೊಹ್ಲಿ ಜತೆಗಿತ್ತು. ಈ 11 ವರ್ಷದಲ್ಲಿ ನಮ್ಮನ್ನು ಖುಷಿಪಡಿಸಿದ್ದೀಯಾ. ಈಗ ಇನ್ನೂ ಒಳ್ಳೆಯ ಜಾಗಕ್ಕೆ ಹೋಗಿದ್ದೀಯಾ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದಲ್ಲಿ ಈ ಬ್ಯಾಟ್ಸ್ ಮನ್ ಗೆ ಬೌಲಿಂಗ್ ಮಾಡುವುದು ಕಷ್ಟ ಎಂದ ಕುಲದೀಪ್ ಯಾದವ್