ಟೀಂ ಇಂಡಿಯಾದಲ್ಲಿ ಈ ಬ್ಯಾಟ್ಸ್ ಮನ್ ಗೆ ಬೌಲಿಂಗ್ ಮಾಡುವುದು ಕಷ್ಟ ಎಂದ ಕುಲದೀಪ್ ಯಾದವ್

ಬುಧವಾರ, 6 ಮೇ 2020 (09:02 IST)
ಮುಂಬೈ: ಟೀಂ ಇಂಡಿಯಾದಲ್ಲಿ ಅನೇಕ ಪ್ರತಿಭಾವಂತ ಬ್ಯಾಟ್ಸ್ ಮನ್ ಗಳಿದ್ದಾರೆ. ಆದರೆ ಸ್ಪಿನ್ನರ್ ಕುಲದೀಪ್ ಯಾದವ್ ಅತೀ ಕಠಿಣ ಬ್ಯಾಟ್ಸ್ ಮನ್ ಯಾರು ಎಂದು ಬಹಿರಂಗಪಡಿಸಿದ್ದಾರೆ.

 

ಟೀಂ ಇಂಡಿಯಾ ನೆಟ್ ಸೆಷನ್ ನಲ್ಲಿ ಬೌಲಿಂಗ್ ಮಾಡಲು ಕಷ್ಟವೆನಿಸುವ ಬ್ಯಾಟ್ಸ್ ಮನ್ ಕುಲದೀಪ್ ಪ್ರಕಾರ ರನ್ ಮೆಷಿನ್ ಕೊಹ್ಲಿಯಂತೂ ಅಲ್ಲ! ಬದಲಿಗೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ‍್ವರ ಪೂಜಾರ ಅವರಂತೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಚೇತೇಶ್ವರ ಪೂಜಾರಗೆ ಬೌಲಿಂಗ್ ಮಾಡುವುದು ತುಂಬಾ ಕಷ್ಟ. ಯಾಕೆಂದರೆ ಅವರು ಆಫ್ ಸ್ಪಿನ್ ಬೌಲಿಂಗ್ ನ್ನು ಚೆನ್ನಾಗಿ ಎದುರಿಸುತ್ತಾರೆ. ಇನ್ನು, ಏಕದಿನ ವಿಚಾರಕ್ಕೆ ಬಂದರೆ ರೋಹಿತ್ ಶರ್ಮಾಗೆ ಬೌಲಿಂಗ್ ಮಾಡುವುದು ಕಷ್ಟ. ಅವರು ದೊಡ್ಡ ಹೊಡೆತಗಳಿಗೆ ಕೈ ಹಾಕಲು ಹಿಂದೆ ಮುಂದೆ ನೋಡಲ್ಲ ಎಂದು ಕುಲದೀಪ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮತ್ತೆ ಧೋನಿ, ಕೊಹ್ಲಿ ವಿರುದ್ಧ ಆರೋಪ ಮಾಡಿದ ಯುವರಾಜ್ ಸಿಂಗ್ ತಂದೆ