Select Your Language

Notifications

webdunia
webdunia
webdunia
webdunia

ವಿಶೇಷ ಅಭಿಮಾನಿಯ ಮನತಣಿಸಿದ ವಿರಾಟ್ ಕೊಹ್ಲಿ

ವಿಶೇಷ ಅಭಿಮಾನಿಯ ಮನತಣಿಸಿದ ವಿರಾಟ್ ಕೊಹ್ಲಿ
ವಿಶಾಖಪಟ್ಟಣ , ಗುರುವಾರ, 3 ಅಕ್ಟೋಬರ್ 2019 (09:13 IST)
ವಿಶಾಖಪಟ್ಟಣ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದರೆ ಹುಚ್ಚು ಅಭಿಮಾನ ತೋರುವ ಎಷ್ಟೋ ಅಭಿಮಾನಿಗಳಿದ್ದಾರೆ. ತಮ್ಮ ಅಭಿಮಾನಿಗಳನ್ನು ಕೊಹ್ಲಿ ಕೂಡಾ ಅಷ್ಟೇ ಗೌರವಿಸುತ್ತಾರೆ.


ಇದೀಗ ವಿಶಾಖಪಟ್ಟಣದಲ್ಲಿ ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ತಮ್ಮ ವಿಶೇಷ ಅಭಿಮಾನಿಯೊಬ್ಬನನ್ನು ವಿರಾಟ್ ಕೊಹ್ಲಿ ಭೇಟಿಯಾಗಿ ಆತನ ಆಸೆ ಪೂರೈಸಿದ್ದಾರೆ.

ಅಭಿಮಾನಿ ಯುವಕನೊಬ್ಬ ತನ್ನ ಬೆನ್ನು, ಎದೆಯ ಮೇಲೆ ವಿರಾಟ್ ಕೊಹ್ಲಿ ಹೆಸರಿನ ಜತೆಗೆ, ಅವರು ಸಾಧನೆಗಳ ವಿವರಗಳನ್ನು ಹಚ್ಚೆ ಹಾಕಿಸಿಕೊಂಡಿದ್ದ. ಈತ ಶರ್ಟ್ ಲೆಸ್ ಆಗಿ ವಿರಾಟ್ ಕೊಹ್ಲಿ ಎದುರು ತನ್ನ ಹಚ್ಚೆ ತೋರಿಸಿಕೊಂಡಿದ್ದಾನೆ. ಅಭಿಮಾನಿಯ ಅಭಿಮಾನಕ್ಕೆ ಮನಸೋತ ಕೊಹ್ಲಿ ಆತನನ್ನು ತಬ್ಬಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀನು ಶತಕ ಗಳಿಸುವುದನ್ನು ನೋಡಲು ಕಾಯುತ್ತಿರುವೆ: ಮಯಾಂಕ್ ಅಗರ್ವಾಲ್ ಗೆ ಕಿಚ್ಚ ಸುದೀಪ್ ಹಾರೈಕೆ