Publish Date: Sat, 23 Jan 2021 (09:10 IST)
Updated Date: Sat, 23 Jan 2021 (09:12 IST)
ಮುಂಬೈ: ಟೀಂ ಇಂಡಿಯಾ ಯುವ ಆಟಗಾರರನ್ನಿಟ್ಟುಕೊಂಡು ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದಿದ್ದು ಒಂದು ಇತಿಹಾಸವೇ ಆಗಿದೆ. ಈ ವಿಚಾರದ ಬಗ್ಗೆ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಆಸಕ್ತಿದಾಯಕ ವಿಚಾರವನ್ನೊಂದನ್ನು ಬಹಿರಂಗಪಡಿಸಿದ್ದಾರೆ.
36 ರನ್ ಗೆ ಆಲೌಟ್ ಆದ ಬಳಿಕ ಮೆಲ್ಬೋರ್ನ್ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದ ನಮಗೆ ಮಧ‍್ಯರಾತ್ರಿ 12.30 ಕ್ಕೆ ವಿರಾಟ್ ಕೊಹ್ಲಿ ಕರೆ ಮಾಡಿದ್ದರು. ಈ ಸರಿ ರಾತ್ರಿಯಲ್ಲಿ ಅವರು ನಮಗೆ ಕರೆ ಮಾಡಿದ್ದು ಆಶ್ಚರ್ಯವಾಗಿತ್ತು. ಆದರೆ ಅವರೂ ನಿಮ್ಮ ಜೊತೆ ನಾನು ಸೇರಿಕೊಳ್ತೀನಿ ಎಂದು ತಂಡದ ಸಭೆಯಲ್ಲಿ ಭಾಗಿಯಾದರು. ಮುಂದಿನ ಪಂದ್ಯಕ್ಕೆ ಹೇಗೆ ತಯಾರಾಗಬೇಕೆಂದು ನಾಯಕ ರೆಹಾನೆ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡರು ಎಂದು ಆರ್ ಶ್ರೀಧರ್, ರವಿಚಂದ್ರನ್ ಅಶ್ವಿನ್ ಜೊತೆಗಿನ ಚಿಟ್ ಚ್ಯಾಟ್ ನಲ್ಲಿ ಬಹಿರಂಗಪಡಿಸಿದ್ದಾರೆ.