Publish Date: Fri, 22 Jan 2021 (07:49 IST)
Updated Date: Fri, 22 Jan 2021 (07:51 IST)
ಚೆನ್ನೈ: ಆಸ್ಟ್ರೇಲಿಯಾದಲ್ಲಿ ಯಶಸ್ವೀ ಪ್ರವಾಸ ಮುಗಿಸಿ ತವರಿಗೆ ಬಂದಿಳಿದ ಟೀಂ ಇಂಡಿಯಾ ಕ್ರಿಕೆಟಿಗ ಟಿ ನಟರಾಜನ್ ಗೆ ಈಗ ಕುಟುಂಬದವರ ಜೊತೆ ಸೆಲೆಬ್ರೇಷನ್ ಮಾಡುವಂತಿಲ್ಲ.
ವಿದೇಶದಿಂದ ಬಂದ ಕಾರಣ ನಟರಾಜನ್ ಕೆಲವು ದಿನಗಳ ಕಾಲ ಐಸೋಲೇಟ್ ಆಗಿರುವಂತೆ ಸ್ಥಳೀಯಾಡಳಿತ ಸೂಚಿಸಿದೆ. ಆದರೆ ಎಷ್ಟು ದಿನಗಳ ಮಟ್ಟಿಗೆ ಈ ರೀತಿ ಏಕಾಂತ ವಾಸ ಮಾಡಬೇಕೆಂದು ಸ್ಪಷ್ಟಪಡಿಸಿಲ್ಲ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ಮಿಂಚಿದ ಖುಷಿಯನ್ನು ಕುಟುಂಬದವರ ಜೊತೆ ಆಚರಿಸುವಂತಿಲ್ಲ.