Select Your Language

Notifications

webdunia
webdunia
webdunia
webdunia

‘ಟೀಂ ಇಂಡಿಯಾ ಯಾರಿಗೂ ಭಯಪಡಲ್ಲ’

‘ಟೀಂ ಇಂಡಿಯಾ ಯಾರಿಗೂ ಭಯಪಡಲ್ಲ’
ನವದೆಹಲಿ , ಶುಕ್ರವಾರ, 29 ಡಿಸೆಂಬರ್ 2017 (08:41 IST)
ನವದೆಹಲಿ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾಗೆ  ಎದುರಾಳಿ ಆಟಗಾರರೆಂದರೆ ಭಯವೇ ಇಲ್ಲವಂತೆ. ಹಾಗಂತ ವೇಗಿ ಮೊಹಮ್ಮದ್ ಶಮಿ ಹೇಳಿಕೊಂಡಿದ್ದಾರೆ.
 

ಖ್ಯಾತ ವೇಗಿ ಡೇಲ್ ಸ್ಟೇನ್ ಇರಲಿ, ಯಾರೇ ಆಗಿರಲಿ, ಭಾರತ ನಿರ್ಭೀತಿಯಿಂದ ಆಡುವುದು ಖಚಿತ. ನಮಗೆ ಯಾರ ಭಯವೂ ಇಲ್ಲ ಎಂದು ಶಮಿ ಹೇಳಿಕೊಂಡಿದ್ದಾರೆ.

ಇದಕ್ಕೂ ಮೊದಲು ಗಾಯದಿಂದ ಮರಳಿರುವ ಸ್ಟೇನ್ ‘ನಾನು ಭಾರತೀಯರಿಗೆ ನನ್ನ ವೇಗದಿಂದಲೇ ಎದೆ ನಡುಗಿಸುತ್ತೇನೆ. ಅವರ ತಲೆಯನ್ನೇ ಗುರಿಯಾಗಿಟ್ಟುಕೊಂಡು ಬಾಲ್ ಮಾಡುತ್ತೇನೆ. ಅವರನ್ನು ಅಲುಗಾಡದಂತೆ ಮಾಡುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಭಾರತೀಯ ವೇಗಿ ಶಮಿ ನಮಗೆ ಯಾರ ಭಯವೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ ಒಂದು ಶಾಕಿಂಗ್ ನ್ಯೂಸ್