Publish Date: Thu, 28 Dec 2017 (08:56 IST)
Updated Date: Thu, 28 Dec 2017 (08:59 IST)
ಮುಂಬೈ: ನೂತನವಾಗಿ ವಿವಾಹವಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹನಿಮೂನ್ ಮುಗಿದಿದೆ. ಇದೀಗ ಡ್ಯೂಟಿ ಟೈಮ್. ನಿನ್ನೆ ಮುಂಬೈ ವಿಮಾನ ನಿಲ್ದಾಣದಿಂದ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜತೆ ದ. ಆಫ್ರಿಕಾ ವಿಮಾನವೇರಿದ್ದಾರೆ.
ದ. ಆಫ್ರಿಕಾದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಆಡಲಿದ್ದು, ಇದಕ್ಕಾಗಿ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತೆರಳಿದೆ. ಕೊಹ್ಲಿ ಜತೆ ಅನುಷ್ಕಾ ಶರ್ಮಾ ಕೂಡಾ ತೆರಳಿದ್ದಾರೆ. ಶಿಖರ್ ಧವನ್ ಕೂಡಾ ಪತ್ನಿ, ಪುತ್ರನ ಸಮೇತ ವಿಮಾನವೇರಿದ್ದಾರೆ.
ಇದಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ವಿರಾಟ್ ಮದುವೆಯ ನಂತರ ಮತ್ತೆ ಕ್ರಿಕೆಟ್ ಕಣಕ್ಕೆ ಮರಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ಮದುವೆಗಾಗಿ ಬ್ರೇಕ್ ತೆಗೆದುಕೊಂಡಿದ್ದರೂ ಕ್ರಿಕೆಟ್ ಬಗ್ಗೆ ನನ್ನ ಗಮನವಿತ್ತು ಎಂದಿದ್ದಾರೆ. ಪತಿ ವಿರಾಟ್ ಜತೆ ಹೊಸ ವರ್ಷಾಚರಣೆ ಬಳಿಕ ಅನುಷ್ಕಾ ಭಾರತಕ್ಕೆ ಮರಳಲಿದ್ದು, ತಮ್ಮ ಸಿನಿಮಾ ಶೂಟಿಂಗ್ ನಲ್ಲಿ ಮಗ್ನರಾಗಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ