Select Your Language

Notifications

webdunia
webdunia
webdunia
webdunia

ದ.ಆಫ್ರಿಕಾದಲ್ಲಿ ಅಡುಗೆ ಭಟ್ಟನನ್ನೇ ಬದಲಿಸಿದ ಟೀಂ ಇಂಡಿಯಾ! ಕಾರಣವೇನು ಗೊತ್ತಾ?

ದ.ಆಫ್ರಿಕಾದಲ್ಲಿ ಅಡುಗೆ ಭಟ್ಟನನ್ನೇ ಬದಲಿಸಿದ ಟೀಂ ಇಂಡಿಯಾ! ಕಾರಣವೇನು ಗೊತ್ತಾ?
ವಾಂಡರರ್ಸ್ , ಸೋಮವಾರ, 19 ಫೆಬ್ರವರಿ 2018 (08:20 IST)
ವಾಂಡರರ್ಸ್: ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ತನ್ನ ಆಹಾರದ ಬಗ್ಗೆ ಕಟ್ಟುನಿಟ್ಟಿನ ಕಾಳಜಿ ವಹಿಸುತ್ತಿದೆ. ಫಿಟ್ ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಿರುವ ಆಟಗಾರರು ಇದೀಗ ದ.ಅಫ್ರಿಕಾದಲ್ಲಿ ತಮಗೆ ಅಡುಗೆ ಮಾಡಿ ಬಡಿಸಿದ್ದ ಬಾಣಸಿಗನನ್ನೇ ಬದಲಿಸಿದ್ದಾರೆ.
 

ಅದಕ್ಕೆ ಕಾರಣ ಆಟಗಾರರಿಗೆ ಆ ಬಾಣಸಿಗ ಮಾಡುವ ಆಹಾರ ಇಷ್ಟವಾಗಿಲ್ಲ. ಕ್ರಿಕೆಟಿಗರಿಗೆ ಇತ್ತೀಚೆಗೆ ಫಿಟ್ ನೆಸ್ಸೇ ಮುಖ್ಯ ಎಂದು ಅರಿವಾಗಿದೆ. ಅದಕ್ಕಾಗಿ ತಮಗೆ ಇಷ್ಟವಿಲ್ಲದ ಅಡುಗೆ ಮಾಡಿಬಡಿಸುತ್ತಿದ್ದ ಬಾಣಸಿಗನನ್ನೂ ಬದಲಿಸಿದ್ದಾರೆ.

ಇದೀಗ ಟೀಂ ಇಂಡಿಯಾ ಆಟಗಾರರು ಉಳಿದುಕೊಂಡಿರುವ ಹೋಟೆಲ್ ನಲ್ಲಿ ಅವರು ಇಷ್ಟಪಡುವಂತೆ ಊಟ ಮಾಡಿ ಬಡಿಸಲು ಹೆಚ್ಚುವರಿಯಾಗಿ ಸ್ಪೆಷಲ್ ಚೆಫ್ ಗಳ ನೇಮಕ ಮಾಡಲಾಗಿದೆಯಂತೆ. ಇವರಿಗೆ ಕ್ರಿಕೆಟಿಗರಿಗೆ ಮತ್ತು ಅವರ ಸಹಾಯಕ ಸಿಬ್ಬಂದಿಗಳಿಗೆ ಅಡುಗೆ ಮಾಡಿ ಕೆಲಸ ಮಾತ್ರ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ವಿರಾಟ್ ಕೊಹ್ಲಿ ಹೊಗಳಲು ಹೊಸ ಡಿಕ್ಷನ್ನರಿ ಹುಡುಕುವೆ’