Publish Date: Sun, 18 Feb 2018 (09:35 IST)
Updated Date: Sun, 18 Feb 2018 (09:37 IST)
ಸೆಂಚೂರಿಯನ್: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮತ್ತೆ ನಾಯಕ ವಿರಾಟ್ ಕೊಹ್ಲಿ ಗುಣಗಾನ ಮಾಡಿದ್ದಾರೆ. ದ.ಆಫ್ರಿಕಾ ವಿರುದ್ಧ ಶತಕಗಳ ಮೇಲೆ ಶತಕ ದಾಖಲಿಸಿ ತಂಡಕ್ಕೆ ಸರಣಿ ಜಯ ಕೊಡಿಸಿದ ನಾಯಕನ ಅತಿರೇಕವೆನಿಸುವ ರೀತಿ ಹೊಗಳಿದ್ದಾರೆ.
‘ಸದ್ಯಕ್ಕೆ ನಾನು ಮಾಡುವ ಕೆಲಸವೆಂದರೆ ಯಾವುದಾದರೂ ಪುಸ್ತಕ ಮಳಿಗೆಗೆ ಹೋಗಿ ಹೊಸ ಆಕ್ಸ್ ಫರ್ಡ್ ಡಿಕ್ಷನ್ನರಿ ಇದೆಯಾ ಎಂದು ನೋಡಬೇಕು’ ಎಂದು ಕೊಹ್ಲಿಯ ಗುಣಗಾನ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಈ ಏಕದಿನ ಸರಣಿಯಲ್ಲಿ ಒಟ್ಟು 3 ಶತಕ ಸಿಡಿಸಿದ್ದಾರೆ. ಈ ಬಗ್ಗೆ ಸಂದರ್ಶಕರು ಕೇಳಿದಾಗ ‘6 ಪಂದ್ಯಗಳಿಂದ 558 ರನ್, 3 ಶತಕ. ಇದಕ್ಕಿಂತ ಹೆಚ್ಚಿನದನ್ನು ನಾವು ಏನು ಕೇಳಲು ಸಾಧ್ಯ?’ ಎಂದು ರವಿಶಾಸ್ತ್ರಿ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ