Select Your Language

Notifications

webdunia
webdunia
webdunia
webdunia

ಈ ದಾಖಲೆ ಮಾಡಿದ ವಿಶ್ವದ ಪ್ರಥಮ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ

ಈ ದಾಖಲೆ ಮಾಡಿದ ವಿಶ್ವದ ಪ್ರಥಮ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ
ಸೆಂಚೂರಿಯನ್ , ಶನಿವಾರ, 17 ಫೆಬ್ರವರಿ 2018 (08:27 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಶತಕ  ಸಿಡಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸದೊಂದು ವಿಕ್ರಮ ಸಾಧಿಸಿದ್ದಾರೆ.
 

ಉಭಯ ದೇಶಗಳ ನಡುವಿನ ಏಕದಿನ ಸರಣಿಯೊಂದರಲ್ಲಿ 500 ರನ್ ಸಂಪಾದಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಅತೀ ಕಡಿಮೆ ಸಮಯದಲ್ಲಿ ಈ ವರ್ಷ 500 ರನ್ ಮಾಡಿದ ದಾಖಲೆ ಮಾಡಿದ್ದಾರೆ. ಇದಕ್ಕಿಂತ ಮೊದಲು ಈ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿತ್ತು. ಇದಲ್ಲದೆ, ಹಲವು ದಾಖಲೆಗಳು ಟೀಂ ಇಂಡಿಯಾ ಪಾಲಾಗಿದೆ.

ಕುಲದೀಪ್ ಯಾದವ್ ಈ ಸರಣಿಯಲ್ಲಿ ಒಟ್ಟು 17 ವಿಕೆಟ್ ಸಂಪಾದಿಸಿದ್ದಾರೆ. ಈ ಮೂಲಕ ಭಾರತದ ಪರ ಸರಣಿಯೊಂದರಲ್ಲಿ ಗರಿಷ್ಠ ವಿಕೆಟ್ ಕಬಳಿಸಿದವರ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಒಂದೇ ಸರಣಿಯಲ್ಲಿ ಮೂರು ಶತಕ ಗಳಿಸಿದ ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಸಾಲಿಗೆ ವಿರಾಟ್ ಕೊಹ್ಲಿ ಸೇರಿಕೊಂಡರು.ಅಷ್ಟೇ ಅಲ್ಲ, ನಾಯಕರಾಗಿ ಅತೀ ಹೆಚ್ಚು ಶತಕ ಗಳಿಸಿದವರ ಸಾಲಿನಲ್ಲಿ ವಿರಾಟ್ ಕೊಹ್ಲಿ 13 ಶತಕಗಳೊಂದಿಗೆ ರಿಕಿ ಪಾಂಟಿಂಗ್ ನಂತರದ ಸ್ಥಾನಕ್ಕೇರಿದರು. ಪಾಂಟಿಗ್ 22 ಶತಕ ಗಳಿಸಿದ್ದಾರೆ. 5-1 ರಿಂದ ಸರಣಿ ಗೆದ್ದ ಭಾರತ ಈ ಮೂಲಕ ವಿದೇಶದಲ್ಲಿ ನಡೆದ ಸರಣಿಯಲ್ಲಿ 5 ಪಂದ್ಯ ಗೆದ್ದು ಮೂರನೆ ಬಾರಿ ಈ ಸಾಧನೆ ಮಾಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಆಫ್ರಿಕಾದಲ್ಲಿ ಅಬ್ಬರಿಸಿದ ಕೊಹ್ಲಿ ಪಡೆ; ವಿರಾಟ್ ಗೆ ದಕ್ಕಿತು ಮತ್ತೊಂದು ಶತಕ