Select Your Language

Notifications

webdunia
webdunia
webdunia
webdunia

ದಾಖಲೆಯ ಹೊಸ್ತಿಲಲ್ಲಿ ಧೋನಿ!

ದಾಖಲೆಯ ಹೊಸ್ತಿಲಲ್ಲಿ ಧೋನಿ!
ಸೆಂಚೂರಿಯನ್ , ಶುಕ್ರವಾರ, 16 ಫೆಬ್ರವರಿ 2018 (16:23 IST)
ಸೆಂಚೂರಿಯನ್: ಟೀಂ ಇಂಡಿಯಾ ಕ್ರಿಕೆಟಿಗ ಎಂಎಸ್ ಧೋನಿ ಹೊಸ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಈವತ್ತಿನ ಪಂದ್ಯದಲ್ಲಿ ಅವರು ಆ ದಾಖಲೆ ಮಾಡುತ್ತಾರಾ ಎಂಬ ನಿರೀಕ್ಷೆ ಅಭಿಮಾನಿಗಳದ್ದು.
 

ಧೋನಿ ಏಕದಿನ ಪಂದ್ಯಗಳಲ್ಲಿ 10000 ರನ್ ಕ್ಲಬ್ ಗೆ ಸೇರಲು ಅನತಿ ದೂರದಲ್ಲಿದ್ದಾರೆ. ಇನ್ನು 33 ರನ್ ಗಳಿಸಿದರೆ ಅವರು ಈ ದಾಖಲೆ ಮಾಡಲಿದ್ದಾರೆ. ಈ ಮೂಲಕ 10000 ರನ್ ಗಳಿಸಿದ ಭಾರತದ ಕೆಲವೇ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.

ಒಂದು ವೇಳೆ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗದಿದ್ದರೆ, ಬ್ಯಾಟಿಂಗ್ ಮಾಡದ ಪಂದ್ಯದ ಖಾತೆಗೆ ಮತ್ತೊಂದು ಇನಿಂಗ್ಸ್ ಸೇರಿಸಿಕೊಳ್ಳಲಿದ್ದಾರೆ. ತಂಡದ ಹಿರಿಯ ಆಟಗಾರನಾಗಿರುವ ಧೋನಿ ಬ್ಯಾಟಿಂಗ್ ಇದೀಗ ಟೀಕಾಕಾರರಿಗೆ ಆಹಾರ ವಸ್ತುವಾಗಿದೆ. ಅಂತಹದ್ದರಲ್ಲಿ ಧೋನಿ ಈವತ್ತು ಅಂತಹದ್ದೊಂದು ಇನಿಂಗ್ಸ್ ಆಡಿದರೆ ದಾಖಲೆ ಮಾತ್ರವಲ್ಲ, ಟೀಕಾಕಾರರಿಗೂ ಉತ್ತರ ಕೊಟ್ಟಂತಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂತಿಮ ಏಕದಿನದಲ್ಲಿ ಮತ್ತೆ ಟೀಂ ಇಂಡಿಯಾಗೆ ಚೇಸಿಂಗ್ ಭಾಗ್ಯ!