Select Your Language

Notifications

webdunia
webdunia
webdunia
webdunia

ಮಾಧ್ಯಮಗಳಿಗೆ ಟಾಂಗ್ ಕೊಟ್ಟ ಕ್ರಿಕೆಟಿಗ ರೋಹಿತ್ ಶರ್ಮಾ!

ಮಾಧ್ಯಮಗಳಿಗೆ ಟಾಂಗ್ ಕೊಟ್ಟ ಕ್ರಿಕೆಟಿಗ ರೋಹಿತ್ ಶರ್ಮಾ!
ಪೋರ್ಟ್ ಎಲಿಜಬೆತ್ , ಗುರುವಾರ, 15 ಫೆಬ್ರವರಿ 2018 (12:05 IST)
ಪೋರ್ಟ್ ಎಲಿಜಬೆತ್: ದ.ಆಫ್ರಿಕಾ ವಿರುದ್ದ ನಾಲ್ಕನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ ಮೇಲೆ ಆತ್ಮವಿಶ್ವಾಸ ಮರಳಿ ಪಡೆದಿರುವ ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಮಾಧ್ಯಮಗಳಿಗೆ ಟಾಂಗ್ ಕೊಟ್ಟಿದ್ದಾರೆ.
 

ಆಫ್ರಿಕಾ ಪ್ರವಾಸದಲ್ಲಿ ಒಮ್ಮೆಯೂ ಲಯಕ್ಕೆ ಬಾರದಿದ್ದಾಗ ರೋಹಿತ್ ಶರ್ಮಾ ಮೇಲೆ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಶತಕ ಗಳಿಸಿದ ಮೇಲೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ ತನ್ನನ್ನು ಟೀಕಿಸಿದವರನ್ನು ಟಾಂಗ್ ಕೊಟ್ಟಿದ್ದಾರೆ.

‘ಮೂರು ಪಂದ್ಯಗಳಲ್ಲಿ ಒಳ್ಳೆ ರನ್ ಮಾಡಲಿಲ್ಲ ಎಂದ ಮಾತ್ರಕ್ಕೆ ನಾನು ಫಾರ್ಮ್ ನಲ್ಲಿಲ್ಲ ಎಂದು ಹೇಗೆ ತೀರ್ಮಾನಿಸಿದಿರಿ. 2013 ರ ಮೊದಲು ಆಗಷ್ಟೇ ನಾನು ಮಧ್ಯಮ ಕ್ರಮಾಂಕದಿಂದ ಆರಂಭಿಕನಾಗಿದ್ದೆ. ಆಗಿನ ಪರಿಸ್ಥಿತಿಯೇ ಬೇರೆ. ಆಗಿನಿಂದ ಈಗವರೆಗೆ ನಾನು ಸಾಕಷ್ಟು ಬೆಳೆದಿದ್ದೇನೆ. ಇದು ಎಲ್ಲಾ ಕ್ರಿಕೆಟಿಗರಿಗೂ ಆಗುವುದೇ. ಎಲ್ಲಾ ದಿನವೂ ನಮ್ಮದಾಗಿರುವುದಿಲ್ಲ’ ಎಂದು ರೋಹಿತ್ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಆರಂಭದಲ್ಲೇ ಧೋನಿ-ರೋಹಿತ್ ಕಾಳಗ!