Publish Date: Sat, 30 Dec 2017 (09:00 IST)
Updated Date: Sat, 30 Dec 2017 (09:03 IST)
ನವದೆಹಲಿ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾ ಪಾಳಯದಲ್ಲಿ ಶಿಖರ್ ಧವನ್ ಗಾಯದ ಸುದ್ದಿ ಆತಂಕ ಉಂಟು ಮಾಡಿದರೂ ಕೆಎಲ್ ರಾಹುಲ್ ಗೆ ಇದು ಲಾಭವಾಗಲಿದೆ.
ಟೀಂ ಇಂಡಿಯಾದಲ್ಲಿ ಈಗ ಆರಂಭಿಕ ಸ್ಥಾನಕ್ಕೆ ಶಿಖರ್ ಧವನ್, ಮುರಳಿ ವಿಜಯ್ ಮತ್ತು ಕೆಎಲ್ ರಾಹುಲ್ ನಡುವೆ ಪೈಪೋಟಿಯಿದೆ. ಶಿಖರ್ ಧವನ್ ಇದ್ದರೆ ವಿಜಯ್ ಜತೆ ಅವರಿಗೇ ನಾಯಕ ಕೊಹ್ಲಿ ಮಣೆ ಹಾಕುವುದು ಖಚಿತ.
ಆದರೆ ಇದೀಗ ಧವನ್ ಗಾಯಕ್ಕೆ ತುತ್ತಾಗಿರುವುದರಿಂದ ಮೊದಲ ಟೆಸ್ಟ್ ಗೆ ಅಲಭ್ಯರಾದರೆ ಕನ್ನಡಿಗ ಕೆಎಲ್ ರಾಹುಲ್ ಗೆ ಆಫ್ರಿಕಾ ಅಂಗಳದಲ್ಲಿ ಆಡುವ ಅವಕಾಶ ಗಟ್ಟಿಯಾಗುತ್ತದೆ. ಒಂದು ವೇಳೆ ಧವನ್ ಬದಲಿಗೆ ಬೇರೊಬ್ಬ ಆಟಗಾರನನ್ನು ಟೀಂ ಇಂಡಿಯಾ ಕರೆಸಿಕೊಂಡರೂ ಮೊದಲ ಆಯ್ಕೆ ರಾಹುಲ್ ಗೆ ಇದ್ದೇ ಇರುತ್ತದೆ. ಹೀಗಾಗಿ ಧವನ್ ಗಾಯ ರಾಹುಲ್ ಪಾಲಿಗೆ ಶುಭವಾಗಿ ಪರಿಣಮಿಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ