Select Your Language

Notifications

webdunia
webdunia
webdunia
Monday, 21 April 2025
webdunia

ಪಾಕಿಸ್ತಾನದಲ್ಲಿ ಅತ್ತೆ ಮನೆಯಲ್ಲಿ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಫುಲ್ ಬಿಂದಾಸ್!

ಸಾನಿಯಾ ಮಿರ್ಜಾ
ಇಸ್ಲಾಮಾಬಾದ್ , ಶನಿವಾರ, 30 ಡಿಸೆಂಬರ್ 2017 (08:08 IST)
ಇಸ್ಲಾಮಾಬಾದ್: ಪಾಕಿಸ್ತಾನಿ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ಮದುವೆಯಾಗಿರುವ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದೀಗ ತಮಗೆ ಸಿಕ್ಕಿರುವ ಬಿಡುವಿನ ವೇಳೆಯನ್ನು ಪಾಕಿಸ್ತಾನದಲ್ಲಿ ಕಳೆಯುತ್ತಿದ್ದಾರೆ.
 

ಮಂಡಿ ನೋವಿನಿಂದಾಗಿ ಟೆನಿಸ್ ಕಣದಿಂದ ದೂರವಿರುವ ಸಾನಿಯಾ ಇದೀಗ ಪಾಕಿಸ್ತಾನದ ಪತಿ ಮನೆಗೆ ತೆರಳಿದ್ದಾರೆ. ಪಾಕ್ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ತಮ್ಮ ಮನೆಯಲ್ಲಿ ಪಾಕ್ ಕ್ರಿಕೆಟಿಗರಿಗೆ ನೀಡಿದ ಔತಣಕೂಟದಲ್ಲಿ ಶೊಯೇಬ್ ಮಲಿಕ್ ಜತೆ ಸಾನಿಯಾ ಕೂಡಾ ಹಾಜರಾಗಿದ್ದಾರೆ.

ಈ ಸಂದರ್ಭದಲ್ಲಿ ಪಾಕ್ ಕ್ರಿಕೆಟಿಗರು ಸಾನಿಯಾ ಮಿರ್ಜಾ ಫೋಟೋಗಳನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಇದರ ಜತೆಗೆ ಸ್ವತಃ ಶೊಯೇಬ್ ಮಲಿಕ್ ಕೂಡಾ ತಮ್ಮ ತಾಯಿ ಜತೆ ಸಾನಿಯಾ ಇರುವ ಫೋಟೋವನ್ನು ಪ್ರಕಟಿಸಿ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫಾರ್ಮ್ ಕಳೆದುಕೊಂಡಿರುವ ಶ್ರೀಲಂಕಾ ಕ್ರಿಕೆಟಿಗರಿಗೆ ಇನ್ನು ‘ಇದಕ್ಕೂ’ ನಿಷೇಧ!