Select Your Language

Notifications

webdunia
webdunia
webdunia
webdunia

ಕೋಣೆಯೊಳಗೆ ಬಂದಿ: ಬಾಗಿಲು ತೆಗೆಯಲು ಎಳೆದಾಡಿದ ಶಿಖರ್ ಧವನ್

ಕೋಣೆಯೊಳಗೆ ಬಂದಿ: ಬಾಗಿಲು ತೆಗೆಯಲು ಎಳೆದಾಡಿದ ಶಿಖರ್ ಧವನ್
ದುಬೈ , ಶುಕ್ರವಾರ, 28 ಆಗಸ್ಟ್ 2020 (12:14 IST)
ದುಬೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿರುವ ಕ್ರಿಕೆಟಿಗರು ಹೋಟೆಲ್ ಕೊಠಡಿಯೊಳಗೆ ಕ್ವಾರಂಟೈನ್ ಅವಧಿ ಪೂರೈಸುತ್ತಿದ್ದಾರೆ. ಈ ನಡುವೆ ಕ್ರಿಕೆಟಿಗ ಶಿಖರ್ ಧವನ್ ತಮಾಷೆಯ ವಿಡಿಯೋ ಒಂದನ್ನು ಪ್ರಕಟಿಸಿದ್ದಾರೆ.


ಪ್ಯಾಡ್, ಬ್ಯಾಟ್ ಕಟ್ಟಿಕೊಂಡು ಅಭ್ಯಾಸಕ್ಕೆ ತೆರಳಲು ರೆಡಿಯಾದ ಧವನ್ ಕೊಠಡಿಯ ಬಾಗಿಲು ಎಷ್ಟೇ ಎಳೆದರೂ ಬರುತ್ತಿಲ್ಲ. ನಮಗೆ ಹೊರಗೆ ಹೋಗಲೂ ಆಗುತ್ತಿಲ್ಲ ಎಂದು ಫನ್ನಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ಧವನ್ ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಕ್ರಿಕೆಟಿಗ ಕುಲದೀಪ್ ಯಾದವ್ ‘ಬಾಯಿ ನೀವು ಕೋಣೆಯೊಳಗೇ ಇರಿ. ಹೊರಗೆ ಬಂದರೆ ಬೇರೆ ತಂಡಗಳಿಗೆ ಕಷ್ಟ’ ಎಂದು ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾ ಶರ್ಮಾ ಡೆಲಿವರಿ ಡೇಟ್ ಬಗ್ಗೆ ಮೊದಲೇ ಭವಿಷ್ಯ ನುಡಿದ ಇಂಗ್ಲೆಂಡ್ ಕ್ರಿಕೆಟಿಗ!