Publish Date: Thu, 23 Mar 2023 (09:30 IST)
Updated Date: Thu, 23 Mar 2023 (09:41 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಗೆ ಈ ಕ್ರಿಕೆಟ್ ನಲ್ಲಿ ಅವಕಾಶಗಳು ಕಡಿಮೆಯಾಗಿವೆ. ಆದರೆ ಹಾಗಂತ ಅವರು ಸುಮ್ಮನೆ ಕುಳಿತಿಲ್ಲ.
ಶಿಖರ್ ಧವನ್ ಐಪಿಎಲ್ ಹೊರತಾಗಿ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುತ್ತಲೇ ಇಲ್ಲ. ಈ ನಡುವೆ ಅವರು ಕ್ರಿಕೆಟ್ ಬಿಟ್ಟು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಸಾಮಾನ್ಯವಾಗಿ ಕ್ರಿಕೆಟಿಗರು ಸಿನಿಮಾಗಳಲ್ಲಿ ಪಾತ್ರ ಮಾಡಿದ ಉದಾಹರಣೆಗಳಿವೆ. ಆದರೆ ಧವನ್ ಧಾರವಾಹಿಗೆ ಎಂಟ್ರಿ ಕೊಡುತ್ತಿದ್ದಾರೆ. ಜೀ ಟಿವಿಯಲ್ಲಿ ಪ್ರಸಾರವಾಗುವ ಹಿಂದಿಯ ಕುಂಡಲಿ ಭಾಗ್ಯ ಧಾರವಾಹಿಯಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಶಿಖರ್ ಪಾತ್ರ ಮಾಡಲಿದ್ದಾರೆ. ಅವರ ಪೊಲೀಸ್ ಗೆಟಪ್ ಈಗಾಗಲೇ ವೈರಲ್ ಆಗಿದ್ದು, ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.