Publish Date: Thu, 23 Mar 2023 (08:40 IST)
Updated Date: Thu, 23 Mar 2023 (09:12 IST)
ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದ ವೇಳೆ ಕುಲದೀಪ್ ಯಾದವ್ ಮೇಲೆ ನಾಯಕ ರೋಹಿತ್ ಶರ್ಮಾ ಮೈದಾನದಲ್ಲಿ ಹುಸಿಮುನಿಸು ತೋರಿದ ಘಟನೆ ನಡೆದಿದೆ.
ಒಂದು ಹಂತದಲ್ಲಿ ತಮ್ಮ ಬೌಲಿಂಗ್ ನಲ್ಲಿ ರಿವ್ಯೂ ತೆಗೆದುಕೊಳ್ಳಲು ನಾಯಕ ರೋಹಿತ್ ನಿರಾಕರಿಸಿದಾಗ ಕುಲದೀಪ್ ಯಾದವ್ ರಿವ್ಯೂ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಕುಲದೀಪ್ ಒತ್ತಾಯಕ್ಕೆ ಮಣಿದು ರೋಹಿತ್ ರಿವ್ಯೂ ಪಡೆದರು. ಆದರೆ ಅದು ಯಶಸ್ವಿಯಾಗಲಿಲ್ಲ.
ಬಳಿಕ ರೋಹಿತ್ ತಮ್ಮ ಎಂದಿನ ಶೈಲಿಯಲ್ಲಿ ಕುಲದೀಪ್ ಮೇಲೆ ಹರಿಹಾಯ್ದರು. ಅವರು ಬೈದಿದ್ದಕ್ಕೆ ಕುಲದೀಪ್ ಮಾತ್ರವಲ್ಲ, ಪಕ್ಕದಲ್ಲಿದ್ದ ವಿರಾಟ್ ಕೊಹ್ಲಿಗೂ ನಗು ತಡೆಯಲಾಗಲಿಲ್ಲ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.