Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಸೋಲಿಗೆ ಮೂರು ಪ್ರಮುಖ ಕಾರಣಗಳು

ಟೀಂ ಇಂಡಿಯಾ ಸೋಲಿಗೆ ಮೂರು ಪ್ರಮುಖ ಕಾರಣಗಳು
ಚೆನ್ನೈ , ಗುರುವಾರ, 23 ಮಾರ್ಚ್ 2023 (08:30 IST)
ಚೆನ್ನೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 21 ರನ್ ಗಳ ಸೋಲು ಅನುಭವಿಸಿತು. ಈ ಸರಣಿಯನ್ನೂ ಆಸೀಸ್ ಕೈ ವಶ ಮಾಡಿಕೊಂಡಿದೆ.

ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಲು ಮೂರು ಪ್ರಮುಖ ಕಾರಣಗಳಿವೆ. ಈ ಸೋಲಿಗೆ ಮೂರು ಪ್ರಮುಖ ಕಾರಣಗಳಿವೆ.

ಮೊದಲನೆಯದಾಗಿ ಕೆಎಲ್ ರಾಹುಲ್-ವಿರಾಟ್ ಕೊಹ್ಲಿ ಉತ್ತಮವಾಗಿ ಆಡುತ್ತಿದ್ದರು. ರಾಹುಲ್ ಔಟಾದ ಬಳಿಕವೂ ವಿರಾಟ್ ಕೊಹ್ಲಿ ಹಾರ್ದಿಕ್ ಪಾಂಡ್ಯ ಜೊತೆಗೂಡಿ ಪಂದ್ಯ ಮುಗಿಸಬಹುದಿತ್ತು. ಅರ್ಧಶತಕ ಗಳಿಸಿ ಉತ್ತಮ ಲಯದಲ್ಲಿ ಕೊಹ್ಲಿ ಅನಗತ್ಯವಾಗಿ ಎತ್ತಿ ಹೊಡೆಯಲು ಹೋಗಿ ಔಟಾದರು. ಇದರಿಂದ ಪಂದ್ಯದ ದಿಕ್ಕು ಬದಲಾಯಿತು.

ಸೂರ್ಯಕುಮಾರ್ ಯಾದವ್ ರನ್ನು ರಕ್ಷಿಸಲು ಅಕ್ಸರ್ ಪಟೇಲ್ ರನ್ನು ಮುಂಬಡ್ತಿ ನೀಡಿ ಬ್ಯಾಟಿಂಗ್ ಗೆ ಕಳುಹಿಸಲಾಯಿತು. ಅಕ್ಸರ್ ಕೊನೆಯಲ್ಲಿ ಎಂದಿನಂತೆ ಬಂದಿದ್ದರೆ ಬಹುಶಃ ಹಾರ್ದಿಕ್ ಗೆ ಸಾಥ್ ನೀಡುತ್ತಿದ್ದರು. ಇನ್ನು ಸತತ ಎರಡು ಗೋಲ್ಡನ್ ಡಕ್ ಗೊಳಗಾಗಿದ್ದ ಸೂರ್ಯಕುಮಾರ್ ಯಾದವ್ ಗೆ ಮೂರನೇ ಅವಕಾಶ ನೀಡುವ ಬದಲು ಸಂಜು ಸ್ಯಾಮ್ಸನ್ ರನ್ನು ಕಣಕ್ಕಿಳಿಸಬಹುದಿತ್ತು. ಆದರೆ ಟೀಂ ಇಂಡಿಯಾ ಮತ್ತೆ ಸೂರ್ಯಕುಮಾರ್ ಗೆ ಜೋತುಬಿದ್ದಿತು. ಆಡಂ ಜಂಪಾ, ಅಶ್ತಾನ್ ಅಗರ್ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಟೀಂ ಇಂಡಿಯಾ ಸೋತಿತು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ಏಕದಿನ: ಟೀಂ ಇಂಡಿಯಾಗೆ ಗೆಲ್ಲಲು 270 ರನ್ ಟಾರ್ಗೆಟ್