Publish Date: Thu, 23 Mar 2023 (08:50 IST)
Updated Date: Thu, 23 Mar 2023 (09:16 IST)
ಮುಂಬೈ: ಐಪಿಎಲ್ 2023 ಆರಂಭಕ್ಕೆ ಬೆರಳೆಣಿಕೆಯ ದಿನಗಳು ಬಾಕಿಯಿದ್ದು, ಭಾರತದ ಕೆಲವು ಸ್ಟಾರ್ ತಾರೆಯರು ಈ ಬಾರಿ ಐಪಿಎಲ್ ನಿಂದ ಹೊರಗುಳಿಯಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್, ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಐಪಿಎಲ್ ನಿಂದ ಹೊರಗುಳಿಯಲಿದ್ದಾರೆ.
ರಿಷಬ್ ಆಕ್ಸಿಡೆಂಟ್ ನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಶ್ರೇಯಸ್ ಅಯ್ಯರ್ ಮತ್ತು ಬುಮ್ರಾ ಬೆನ್ನು ನೋವಿಗೊಳಗಾಗಿದ್ದಾರೆ. ಬುಮ್ರಾ ಅಂತೂ ಕೆಲವು ಸಮಯದಿಂದ ಕ್ರಿಕೆಟ್ ನಿಂದ ದೂರವಿದ್ದಾರೆ. ಮುಂದಿನ ಏಕದಿನ ವಿಶ್ವಕಪ್ ವೇಳೆ ಅವರು ತಂಡಕ್ಕೆ ಫಿಟ್ ಆಗಿ ಮರಳಲು ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಈ ಮೂವರು ತಾರೆಯರು ಐಪಿಎಲ್ 2023 ರಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ. ಇವರ ಹೊರತಾಗಿ ಡಬ್ಲ್ಯುಟಿಸಿ ಫೈನಲ್ ಆಡಲಿರುವ ಕ್ರಿಕೆಟಿಗರು ಐಪಿಎಲ್ ನಲ್ಲಿ ಅಷ್ಟೇನೂ ಮಹತ್ವವಲ್ಲದ ಪಂದ್ಯಗಳಿಂದ ಹೊರಗುಳಿಯುವ ಸಾಧ‍್ಯತೆಗಳಿವೆ. ಮಾರ್ಚ್ 31 ರಿಂದ ಐಪಿಎಲ್ 2023 ಆರಂಭವಾಗಲಿದೆ.