Publish Date: Thu, 23 Mar 2023 (09:10 IST)
Updated Date: Thu, 23 Mar 2023 (09:36 IST)
ಮುಂಬೈ: ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. 2011 ರ ಬಳಿಕ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಇದಾಗಿದೆ.
ಈಗಾಗಲೇ ಬಿಸಿಸಿಐ ಅಕ್ಟೋಬರ್ 5 ರಿಂದ ಟೂರ್ನಿಗೆ ಚಾಲನೆ ನೀಡಲು ತೀರ್ಮಾನಿಸಿದೆ. ಅಹಮ್ಮದಾಬಾದ್ ನಲ್ಲಿ ಫೈನಲ್ ಪಂದ್ಯ ನಡೆಯುವ ಸಾಧ‍್ಯತೆಯಿದೆ. ಪಾಕಿಸ್ತಾನ ತಂಡ ಕೂಡಾ ಭಾರತ ಪ್ರವಾಸ ಮಾಡಲಿದ್ದು, ಪಾಕ್ ತಂಡಕ್ಕೆ ಎರಡು ತಾಣಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ವ್ಯವಸ್ಥೆ ಮಾಡಲಾಗಿದೆ.
ಉಳಿದಂತೆ ಬೆಂಗಳೂರು, ಚೆನ್ನೈ, ಡೆಲ್ಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕೊತ್ತಾ, ಲಕ್ನೋ, ಇಂಧೋರ್, ರಾಜ್ ಕೋಟ್ ಮತ್ತ ಮುಂಬೈನಲ್ಲಿ ಪಂದ್ಯಗಳು ನಡೆಯುವ ಸಾಧ‍್ಯತೆಯಿದೆ. ನವಂಬರ್ 19 ಕ್ಕೆ ಫೈನಲ್ ಪಂದ್ಯ ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ.
Krishnaveni K
Publish Date: Thu, 23 Mar 2023 (09:10 IST)
Updated Date: Thu, 23 Mar 2023 (09:36 IST)