ಟೀಂ ಇಂಡಿಯಾಕ್ಕೆ ಆಯ್ಕೆಯಾಗದ ಹತಾಶೆ ಈ ರೀತಿ ಹೊರಹಾಕಿದ ಸಂಜು ಸ್ಯಾಮ್ಸನ್

ಶನಿವಾರ, 18 ಜನವರಿ 2020 (09:31 IST)
ಮುಂಬೈ: ಪ್ರತಿಭೆಯಿದ್ದೂ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಸಿಗದ ಹತಾಶೆಯನ್ನು ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ವಿಶಿಷ್ಟವಾಗಿ ಹೊರಹಾಕಿದ್ದಾರೆ.


ರಿಷಬ್ ಪಂತ್ ಗೆ ಕಳಪೆ ಆಟದ ಹೊರತಾಗಿಯೂ ಪದೇ ಪದೇ ಅವಕಾಶ ನೀಡಲಾಗುತ್ತಿದೆ. ಆದರೆ ಸಂಜು ಸ್ಯಾಮ್ಸನ್ ಗೆ ಭಾರೀ ಒತ್ತಾಯದ ಬಳಿಕ ಲಂಕಾ ವಿರುದ್ಧದ ಒಂದೇ ಒಂದು ಪಂದ್ಯಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮತ್ತೆ ತಂಡದಿಂದ ಕೈ ಬಿಡಲಾಗಿದೆ. ಈ ರೀತಿ ಅವಕಾಶ ಕೊಡದೇ ಸತಾಯಿಸುತ್ತಿರುವ ಆಯ್ಕೆ ಸಮಿತಿ ವಿರುದ್ಧ ಸಂಜು ಟ್ವಿಟರ್ ಮೂಲಕ ಹತಾಶೆ ಹೊರಹಾಕಿದ್ದಾರೆ.

ಕೇವಲ ಒಂದು ಕೊಮಾ ಚಿಹ್ನೆ ಟ್ವೀಟ್ ಮಾಡಿರುವ ಸಂಜು ಸ್ಯಾಮ್ಸನ್ ವಿಶಿಷ್ಟವಾಗಿ ಹತಾಶೆ ಹೊರಹಾಕಿದ್ದಾರೆ. ಸ್ಯಾಮ್ಸನ್ ರ ಈ ಟ್ವೀಟ್ ಗೆ ಅಭಿಮಾನಿಗಳೂ ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸೂಪರ್ ಹಿಟ್ ಆಯ್ತು ವಿರಾಟ್ ಕೊಹ್ಲಿ ಪ್ಲ್ಯಾನ್