Publish Date: Mon, 15 Aug 2022 (09:20 IST)
Updated Date: Mon, 15 Aug 2022 (09:31 IST)
ಮುಂಬೈ: 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜನ ತಮ್ಮ ಸೋಷಿಯಲ್ ಮೀಡಿಯಾ ಡಿಪಿಯಲ್ಲಿ ತಿರಂಗಾ ಹಾಕಿಕೊಳ್ಳುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದರು.
ಅದರಂತೆ ಈಗಾಗಲೇ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ರಿಷಬ್ ಪಂತ್ ಸೇರಿದಂತೆ ಬಹುತೇಕ ಕ್ರಿಕೆಟಿಗರು ಪ್ರೊಫೈಲ್ ಫೋಟೋಗೆ ತಿರಂಗಾ ಹಾಕಿಕೊಂಡಿದ್ದಾರೆ.
ಆದರೆ ಟೀಂ ಇಂಡಿಯಾ ಖಾಯಂ ನಾಯಕ ರೋಹಿತ್ ಶರ್ಮಾ ಮಾತ್ರ ಈಗಲೂ ತಮ್ಮ ಡಿಪಿ ಬದಲಾಯಿಸಿಲ್ಲ. ಈ ಕಾರಣಕ್ಕೆ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಕೂಡಾ ಡಿಪಿ ಬದಲಾಯಿಸಿದ್ದಾರೆ, ನೀವು ಮಾತ್ರ ಯಾಕೆ ಇನ್ನೂ ಬದಲಾಯಿಸಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.