Publish Date: Sat, 13 Aug 2022 (09:40 IST)
Updated Date: Sat, 13 Aug 2022 (09:53 IST)
ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ಆದರೆ ಈಗ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಧೋನಿ ಡಿಪಿ ಬದಲಾಯಿಸಿದ್ದಾರೆ.
75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರಧ್ವಜವನ್ನೇ ಡಿಪಿಯಾಗಿಟ್ಟುಕೊಳ್ಳಲು ಪ್ರಧಾನಿ ಮೋದಿ ಕರೆ ನೀಡಿದ್ದರು.
ಅದರಂತೆ ಬಹುತೇಕ ಸೆಲೆಬ್ರಿಟಿಗಳು ಡಿಪಿ ಬದಲಾಯಿಸಿದ್ದಾರೆ. ಇದೀಗ ಧೋನಿ ಕೂಡಾ ಟ್ರೆಂಡ್ ನಲ್ಲಿ ಭಾಗಿಯಾಗಿದ್ದು ಬರೋಬ್ಬರಿ 2 ವರ್ಷಗಳ ಬಳಿಕ ಡಿಪಿ ಬದಲಾಯಿಸಿದ್ದಾರೆ.