Publish Date: Fri, 12 Aug 2022 (09:15 IST)
Updated Date: Fri, 12 Aug 2022 (09:17 IST)
ಮುಂಬೈ: ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನಿಂದಾಗಿ ಏಷ್ಯಾ ಕಪ್ ಟೂರ್ನಿಗೆ ಗೈರಾಗಲಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಆಘಾತ ಎದುರಾಗಿದೆ.
ಬುಮ್ರಾ ಮುಂಬರುವ ಐಸಿಸಿ ಟಿ20 ವಿಶ್ವಕಪ್ ನಲ್ಲೂ ಆಡುವುದು ಅನುಮಾನ ಎನ್ನಲಾಗುತ್ತಿದೆ. ಒಂದು ವೇಳೆ ಬುಮ್ರಾ ಇಲ್ಲದೇ ಹೋದರೆ ಭಾರತದಕ್ಕೆ ದೊಡ್ಡ ನಷ್ಟವಾಗಲಿದೆ.
2019 ರಿಂದಲೂ ಬುಮ್ರಾಗೆ ಬೆನ್ನು ನೋವಿನ ಸಮಸ್ಯೆಯಿದೆ. ಈಗ ಅವರು ಬೆಂಗಳೂರಿನ ಎನ್ ಸಿಎನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಸ್ಯೆಯೇನೆಂದರೆ ಅವರ ನೋವು ಈ ಬಾರಿ ಮತ್ತಷ್ಟು ಗಂಭೀರವಾಗಿದೆ. ಈ ಬಾರಿ ಅವರು ಬೇಗನೇ ಚೇತರಿಸಿಕೊಳ್ಳುವುದು ಕಷ್ಟವೆನಿಸುತ್ತಿದೆ. ಹೀಗಾಗಿ ಟಿ20 ವಿಶ್ವಕಪ್ ವೇಳೆಗೂ ತಂಡಕ್ಕೆ ಬರುವುದು ಕಷ್ಟವೆನಿಸುತ್ತಿದೆ.