Publish Date: Thu, 11 Aug 2022 (09:30 IST)
Updated Date: Thu, 11 Aug 2022 (09:43 IST)
ಮುಂಬೈ: ಬಹಳ ಸಮಯದ ನಂತರ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದಿದ್ದ ಯುವ ಕ್ರಿಕೆಟಿಗ ವಾಷಿಂಗ್ಟನ್ ಸುಂದರ್ ಗೆ ಯಾಕೋ ಅದೃಷ್ಟ ಸರಿಯಿಲ್ಲ.
ಕಳೆದ ವರ್ಷ ಬಹುತೇಕ ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದ ವಾಷಿಂಗ್ಟನ್ ಸುಂದರ್ ಈಗಷ್ಟೇ ಜಿಂಬಾಬ್ವೆ ವಿರುದ್ಧದ ಸರಣಿಗೆ ತಂಡಕ್ಕೆ ಆಯ್ಕೆಯಾಗಿದ್ದರು.
ಆದರೆ ಜಿಂಬಾಬ್ವೆಗೆ ತೆರಳುವ ಮೊದಲೇ ವಾಷಿಂಗ್ಟನ್ ಮತ್ತೆ ಗಾಯಕ್ಕೊಳಗಾಗಿದ್ದಾರೆ. ಕೌಂಟಿ ಕ್ರಿಕೆಟ್ ನಲ್ಲಿ ಆಡುವಾಗ ವಾಷಿಂಗ್ಟನ್ ಸುಂದರ್ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ. ಇದೀಗ ಅವರು ಜಿಂಬಾಬ್ವೆ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.