ಮುಂಬೈ: ಐಪಿಎಲ್ ಫ್ರಾಂಚೈಸಿಗಳು ಇತ್ತೀಚೆಗೆ ಎಲ್ಲಾ ವಿದೇಶೀ ಲೀಗ್ ನಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿವೆ. ಹೀಗಾಗಿ ವಿದೇಶೀ ಲೀಗ್ ನಲ್ಲಿ ಭಾರತೀಯ ಸ್ಟಾರ್ ಆಟಗಾರರು ಪಾಲ್ಗೊಳ್ಳಬಹುದು ಎಂಬ ಸುದ್ದಿಗಳಿತ್ತು.
ಆದರೆ ಬಿಸಿಸಿಐಗೆ ಐಪಿಎಲ್ ಫ್ರಾಂಚೈಸಿಗಳು ವಿದೇಶೀ ಲೀಗ್ ಗಳಲ್ಲಿ ಹೂಡಿಕೆ ಮಾಡುತ್ತಿರುವುದು ತಲೆನೋವಿನ ವಿಷಯವಾಗಿದೆ. ಐಪಿಎಲ್ ಗೆ ಒಂದು ಬ್ರ್ಯಾಂಡ್ ಇದೆ, ಶ್ರೀಮಂತ ಲೀಗ್ ಎಂಬ ಹೆಗ್ಗಳಿಕೆಯಿರುತ್ತದೆ.
ಆದರೆ ಐಪಿಎಲ್ ಫ್ರಾಂಚೈಸಿಗಳು ವಿದೇಶೀ ಲೀಗ್ ನಲ್ಲಿ ಹೂಡಿಕೆ ಮಾಡುವುದರಿಂದ ಆ ಲೀಗ್ ಗಳು ಐಪಿಎಲ್ ಗೆ ಸೆಡ್ಡು ಹೊಡೆಯಬಹುದು. ಇದರಿಂದ ಐಪಿಎಲ್ ಬ್ರ್ಯಾಂಡ್ ಧಕ್ಕೆಯಾಗಬಹುದು ಎಂಬ ಚಿಂತೆ ಬಿಸಿಸಿಐಗೆ. ಹೀಗಾಗಿ ಭಾರತೀಯ ಕ್ರಿಕೆಟಿಗರನ್ನು ವಿದೇಶೀ ಲೀಗ್ ಗೆ ಕಳುಹಿಸುವ ಯೋಚನೆ ಬಿಸಿಸಿಐಗಿಲ್ಲ ಎನ್ನಲಾಗುತ್ತಿದೆ.