Publish Date: Thu, 11 Aug 2022 (16:57 IST)
Updated Date: Thu, 11 Aug 2022 (16:59 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಮತ್ತು ನಟಿ ಊರ್ವಶಿ ರೌಟೇಲಾ ಡೇಟಿಂಗ್ ನಡೆಸುತ್ತಿದ್ದರು ಎಂಬ ಸುದ್ದಿಯಿತ್ತು. ಇದೀಗ ನಟಿ ಊರ್ವಶಿ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ರಿಷಬ್ ಗೆ ಕಿರಿ ಕಿರಿಯುಂಟು ಮಾಡಿದೆ.
ರಿಷಬ್ ಪಂತ್ ರ ಹೆಸರನ್ನು ನೇರವಾಗಿ ಉಲ್ಲೇಖಿಸದೇ ನಟಿ ಊರ್ವಶಿ ದೆಹಲಿಯ ಹೋಟೆಲ್ ಒಂದರಲ್ಲಿ ಶೂಟಿಂಗ್ ಮುಗಿಸಿ ಬಂದಾಗ ನನಗಾಗಿ ಆರ್ ಪಿ ಹೋಟೆಲ್ ಬಾಲ್ಕನಿಯಲ್ಲಿ ಕಾಯುತ್ತಿದ್ದರು. ಆದರೆ ನನಗೆ ಸತತ 10 ಗಂಟೆ ಶೂಟಿಂಗ್ ಮಾಡಿ ಸುಸ್ತಾಗಿದೆ, ಮುಂಬೈಗೆ ಬಂದಾಗ ಭೇಟಿಯಾಗುವುದಾಗಿ ಹೇಳಿ ಕಳುಹಿಸಿದೆ ಎಂದಿದ್ದರು.
ಇದಕ್ಕೆ ರಿಷಬ್ ಕೂಡಾ ಪರೋಕ್ಷವಾಗಿ ಊರ್ವಶಿ ಹೆಸರೆತ್ತದೇ ಟಾಂಗ್ ಕೊಟ್ಟಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಕೆಲವರಿಗೆ ಜನಪ್ರಿಯತೆ ಪಡೆಯುವ ಹಸಿವು ಎಷ್ಟಿರುತ್ತದೆಂದರೆ ಅದಕ್ಕಾಗಿ ಸಂದರ್ಶನಗಳಲ್ಲಿ ಹಸಿ ಸುಳ್ಳು ಹೇಳಲೂ ಹಿಂಜರಿಯುವುದಿಲ್ಲ. ದಯವಿಟ್ಟು ಸಹೋದರಿ, ನನ್ನ ಬೆನ್ನ ಹಿಂದೆ ಬೀಳಬೇಡ ಎಂದು ಸಂದೇಶ ಬರೆದಿದ್ದರು. ಈ ಸಂದೇಶ ವೈರಲ್ ಆಗುತ್ತಿದ್ದಂತೇ ರಿಷಬ್ ಇದನ್ನು ಡಿಲೀಟ್ ಮಾಡಿದ್ದಾರೆ.