Publish Date: Fri, 12 Aug 2022 (15:58 IST)
Updated Date: Fri, 12 Aug 2022 (16:00 IST)
ಮುಂಬೈ: ನಟಿ ಊರ್ವಶಿ ರೌಟೇಲಾ ಮತ್ತು ರಿಷಬ್ ಪಂತ್ ನಡುವಿನ ವಾಗ್ವಾದ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಸಂದರ್ಶನವೊಂದರಲ್ಲಿ ರಿಷಬ್ ಬಗ್ಗೆ ಪರೋಕ್ಷವಾಗಿ ಊರ್ವಶಿ ಹೇಳಿಕೆ ಕೊಟ್ಟ ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ.
ಸಂದರ್ಶನವೊಂದರಲ್ಲಿ ಊರ್ವಶಿ ರಿಷಬ್ ಹೆಸರನ್ನು ಪರೋಕ್ಷವಾಗಿ ಸೂಚಿಸಿ ದೆಹಲಿಯ ಹೋಟೆಲ್ ನಲ್ಲಿ ನನಗಾಗಿ ತುಂಬಾ ಹೊತ್ತು ಕಾದರು, ಅನೇಕ ಬಾರಿ ಕರೆ ಮಾಡಿದರು. ಆದರೆ ಶೂಟಿಂಗ್ ನಿಂದ ಸುಸ್ತಾಗಿದ್ದ ನಾನು ಮರಳಿ ಹೋಗುವಂತೆ ಹೇಳಿದೆ ಎಂದಿದ್ದರು.
ಇದರ ಬಳಿಕ ರಿಷಬ್ ಇ ನ್ಸ್ಟಾಗ್ರಾಂನಲ್ಲಿ ಕೆಲವರಿಗೆ ಸಂದರ್ಶನಗಳಲ್ಲಿ ಸುಳ್ಳು ಹೇಳಿ ಜನಪ್ರಿಯತೆ ಗಿಟ್ಟಿಸುವ ಹುಚ್ಚು ಎಂದಿದ್ದರು. ಬಳಿಕ ಆ ಸಂದೇಶವನ್ನು ಡಿಲೀಟ್ ಕೂಡಾ ಮಾಡಿದ್ದರು. ಆದರೆ ಇದು ಇಷ್ಟಕ್ಕೇ ನಿಂತಿಲ್ಲ. ಇದೀಗ ಊರ್ವಶಿ ಮತ್ತೆ ರಿಷಬ್ ಗೆ ತಿರುಗೇಟು ನೀಡಿದ್ದು, ರಕ್ಷಾಬಂಧನ್ ಗೆ ಶುಭಾಷಯ ಕೋರಿ ಪರೋಕ್ಷವಾಗಿ ರಿಷಬ್ ಗೆ ತಿವಿದಿದ್ದಾರೆ. ಹುಡುಗ ನೀನು ಕ್ರಿಕೆಟ್ ಆಡುವುದರ ಬಗ್ಗೆ ಗಮನಕೊಡು. ನಿನ್ನ ಜೊತೆ ಪ್ರೀತಿಯಲ್ಲಿ ಬೀಳಲು ನಾನು ಮುನ್ನಿ ಅಲ್ಲ ಎಂದು ಬರೆದುಕೊಂಡಿದ್ದಾರೆ.