Publish Date: Mon, 15 Aug 2022 (08:30 IST)
Updated Date: Mon, 15 Aug 2022 (08:49 IST)
ಮುಂಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾಗಿರುವ ಟೀಂ ಇಂಡಿಯಾದಲ್ಲಿ ಮೊಹಮ್ಮದ್ ಶಮಿ ಹೆಸರಿಲ್ಲದೇ ಇರುವುದು ನೆಟ್ಟಿಗರ ಟೀಕೆಗೆ ಗುರಿಯಾಗಿತ್ತು.
ಕೇವಲ ಆವೇಶ್ ಖಾನ್, ಅರ್ಷ್ ದೀಪ್ ಸಿಂಗ್ ಮುಂತಾದ ಯುವ ಪ್ರತಿಭೆಗಳಿಗೆ ಮಣೆ ಹಾಕಿರುವ ಬಿಸಿಸಿಐ ನಿರ್ಧಾರದ ಕುರಿತು ಭಾರೀ ಟೀಕೆಯಾಗಿತ್ತು. ಬುಮ್ರಾ ಇಲ್ಲದೇ ಇರುವಾಗ ಮೊಹಮ್ಮದ್ ಶಮಿಗೆ ಅವಕಾಶ ನೀಡಬೇಕಿತ್ತು ಎಂಬುದು ಫ್ಯಾನ್ಸ್ ಅಭಿಪ್ರಾಯ.
ಇದು ಟಿ20 ವಿಶ್ವಕಪ್ ವೇಳೆಗೆ ಈಡೇರುವ ಸಾಧ್ಯತೆಯಿದೆ. ಟಿ20 ವಿಶ್ವಕಪ್ ಗೂ ಬುಮ್ರಾ ತಂಡಕ್ಕೆ ಬರುವುದು ಅನುಮಾನ. ಹೀಗಿರುವಾಗ ಪವರ್ ಪ್ಲೇಯಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಬಲ್ಲ ಮೊಹಮ್ಮದ್ ಶಮಿಗೆ ಅವಕಾಶ ಸಿಗುವ ಸಾಧ‍್ಯತೆಯಿದೆ ಎಂದು ಬಿಸಿಸಿಐ ಮೂಲಗಳಿಂದಲೇ ತಿಳಿದುಬಂದಿದೆ.