Publish Date: Wed, 13 Jul 2022 (09:30 IST)
Updated Date: Wed, 13 Jul 2022 (09:41 IST)
ಲಂಡನ್: ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಇನಿಂಗ್ಸ್ ಆಡಿದ್ದರು. ಅರ್ಧಶತಕದ ಇನಿಂಗ್ಸ್ ನಲ್ಲಿ ರೋಹಿತ್ ಐದು ಸಿಕ್ಸರ್ ಚಚ್ಚಿದ್ದರು.
ಆದರೆ ರೋಹಿತ್ ಹೊಡೆದ ಸಿಕ್ಸರ್ ಒಂದು ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತಿದ್ದ ಮಗುವಿಗೆ ಬಿದ್ದು ಏಟಾಗಿತ್ತು. ಡೇವಿಡ್ ವಿಲ್ಲಿ ಎಸೆತದಲ್ಲಿ ರೋಹಿತ್ ಭರ್ಜರಿ ಸಿಕ್ಸರ್ ಸಿಡಿಸಿದ್ದರು.
ಏಟು ಬಿದ್ದ ರಭಸಕ್ಕೆ ಮಗು ಜೋರಾಗಿ ಅಳುತ್ತಿತ್ತು. ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡದ ಫಿಸಿಯೋ ಮಗುವಿನ ಬಳಿ ತೆರಳಿ ಪ್ರಥಮ ಚಿಕಿತ್ಸೆ ನೀಡಿದರು.