Publish Date: Tue, 12 Jul 2022 (16:19 IST)
Updated Date: Tue, 12 Jul 2022 (16:21 IST)
ಮುಂಬೈ: ರನ್ ಬರಗಾಲ ಎದುರಿಸುತ್ತಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿರುದ್ಧ ಇಂದು ಮತ್ತೊಬ್ಬ ಮಾಜಿ ಕ್ರಿಕೆಟಿಗ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಕೊಹ್ಲಿ ವಿರುದ್ಧ ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಕೊಹ್ಲಿ ದೇಶೀಯ ಕ್ರಿಕೆಟ್ ನಲ್ಲಿ ರನ್ ಗಳಿಸಿಕೊಂಡು ಬರಲಿ ಎಂದಿದ್ದಾರೆ.
ಸದ್ಯಕ್ಕೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿಯಿದೆ. ಸಾಮಾನ್ಯವಾಗಿ ಯಾವುದೇ ಆಟಗಾರನೂ ರನ್ ಗಳಿಸದೇ ಇದ್ದಾಗ ದೇಶೀಯ ಕ್ರಿಕೆಟ್ ನಲ್ಲಿ ಆಡಿ ಬನ್ನಿ ಆಮೇಲೆ ನೋಡೋಣ ಎನ್ನುತ್ತಾರೆ. ಆದರೆ ಆ ನಿಯಮ ಕೊಹ್ಲಿಗೆ ಯಾಕೆ ಅನ್ವಯಿಸುವುದಿಲ್ಲವೋ ಗೊತ್ತಿಲ್ಲ ಎಂದಿದ್ದಾರೆ.