Publish Date: Mon, 11 Jul 2022 (16:13 IST)
Updated Date: Mon, 11 Jul 2022 (16:15 IST)
ಮುಂಬೈ: ಉತ್ತಮ ಪ್ರದರ್ಶನ ನೀಡದೇ ಹೋದರೆ ಹೆಸರಿನ ಬಲದಿಂದ ತಂಡದಲ್ಲಿ ಸ್ಥಾನ ನೀಡಬಾರದು ಎಂದು ವಿರಾಟ್ ಕೊಹ್ಲಿಗೆ ಪರೋಕ್ಷ ಟಾಂಗ್ ಕೊಟ್ಟ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ವಿರುದ್ಧ ಕೊಹ್ಲಿ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ.
ವೆಂಕಟೇಶ್ ಪ್ರಸಾದ್ ಕೊಹ್ಲಿ ಬಗ್ಗೆ ಹೇಳಿಕೆ ನೀಡುವಷ್ಟು ಸಾಧನೆ ಮಾಡಿಲ್ಲ ಎಂದು ಕೊಹ್ಲಿ ಅಭಿಮಾನಿಗಳು ಟಾಂಗ್ ಕೊಟ್ಟಿದ್ದಾರೆ.
ಇನ್ನು, ಕೆಲವರು ವೆಂಕಟೇಶ್ ಪ್ರಸಾದ್ ರೋಹಿತ್ ಶರ್ಮಾರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಮತ್ತೆ ಕೆಲವರು ವಿರಾಟ್ ಎಂದರೆ ಸಚಿನ್, ದ್ರಾವಿಡ್ ರಂತಹ ದಿಗ್ಗಜರ ಸಾಲಿನಲ್ಲಿ ಬರುತ್ತಾರೆ. ಹೀಗಾಗಿ ನಿಮ್ಮ ಹೇಳಿಕೆ ಕೊಹ್ಲಿಗೆ ಅನ್ವಯಿಸಲ್ಲ ಎಂದಿದ್ದಾರೆ.