Select Your Language

Notifications

webdunia
webdunia
webdunia
webdunia

ಕ್ಯಾಪ್ಟನ್ ರೋಹಿತ್ ಶರ್ಮಾಗೆ ಬೈಗುಳ ನೀಡಿದರೇ ಹಾರ್ದಿಕ್ ಪಾಂಡ್ಯ? ವಿಡಿಯೋ ವೈರಲ್

ಕ್ಯಾಪ್ಟನ್ ರೋಹಿತ್ ಶರ್ಮಾಗೆ ಬೈಗುಳ ನೀಡಿದರೇ ಹಾರ್ದಿಕ್ ಪಾಂಡ್ಯ? ವಿಡಿಯೋ ವೈರಲ್
ಬರ್ಮಿಂಗ್ ಹ್ಯಾಮ್ , ಸೋಮವಾರ, 11 ಜುಲೈ 2022 (08:20 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಮೈದಾನದಲ್ಲಿ ಬೌಲರ್ ಹಾರ್ದಿಕ್ ಪಾಂಡ್ಯ ಬೈಗುಳದ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೈದಾನದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ವೇಳೆ ಫೀಲ್ಡರ್ ಒಬ್ಬರಿಗೆ ನಾನು ಬೌಲಿಂಗ್ ಮಾಡುವಾಗ ಕ್ಯಾಪ್ಟನ್ ಮಾತಲ್ಲ, ನನ್ನ ಮಾತು ಕೇಳಬೇಕು ಎಂದು ವಾಗ್ದಾಳಿ ನಡೆಸುತ್ತಾರೆ. ಆದರೆ ಇಲ್ಲಿ ಹಾರ್ದಿಕ್ ಮುಖ ಕಾಣಿಸುವುದಿಲ್ಲ.

ಕೇವಲ ಧ್ವನಿ ಮಾತ್ರ ಅವರಂತೆ ಕೇಳಿಸುತ್ತಿದೆ. ಆದರೆ ನೆಟ್ಟಿಗರು ಈ ವಿಡಿಯೋವನ್ನು ವೈರಲ್ ಮಾಡಿದ್ದು, ಹಾರ್ದಿಕ್ ತಮ್ಮ ಸ್ಥಾನ ಮರೆತು ರೋಹಿತ್ ಗೆ ಬೈಗುಳ ನೀಡುವಷ್ಟು ದೊಡ್ಡವರಾಗಬಾರದು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟಿ20: ಸೋಲಿನ ನಡುವೆ ಹೊಳೆದ ‘ಸೂರ್ಯ’