ನ್ಯಾಟಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರನೇ ಮತ್ತು ಅಂತಿಮ ಟಿ20 ಪಂದ್ಯ ಇಂದು ನಡೆಯಲಿದೆ.
ಈಗಾಗಲೇ ಭಾರತ 2-0 ಅಂತರದಿಂದ ಮುನ್ನಡೆಯಲ್ಲಿರುವುದರಿಂದ ಇಂದಿನ ಪಂದ್ಯ ಸೋತರೂ ಟೀಂ ಇಂಡಿಯಾಕ್ಕೆ ವ್ಯತ್ಯಾಸವಾಗದು. ಒಂದು ವೇಳೆ ಗೆದ್ದರೆ ವೈಟ್ ವಾಶ್ ಮಾಡಿದ ಗೌರವ ಪ್ರಾಪ್ತಿಯಾಗಲಿದೆ.
ರೋಹಿತ್ ಪಡೆ ಕಳೆದ ಎರಡೂ ಪಂದ್ಯಗಳಲ್ಲಿ ಅದ್ಭುತ ಬೌಲಿಂಗ್ ನಿಂದಾಗಿ ಎದುರಾಳಿ ಬ್ಯಾಟಿಗರನ್ನು ಕಟ್ಟಿ ಹಾಕಿದೆ. ಇಂದೂ ಕೂಡಾ ಅದೇ ಪ್ರದರ್ಶನ ನೀಡುವ ವಿಶ್ವಾಸದಲ್ಲಿ ಭಾರತ ತಂಡವಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 7 ಗಂಟೆಗೆ ನಡೆಯಲಿದೆ.