Select Your Language

Notifications

webdunia
webdunia
webdunia
webdunia

ಸಿಎಸ್ ಕೆ ಫೋಟೋಗಳನ್ನು ಡಿಲೀಸ್ ಮಾಡಿದ ರವೀಂದ್ರ ಜಡೇಜಾ: ಫ್ರಾಂಚೈಸಿಯಿಂದ ಸ್ಪಷ್ಟನೆ

ಸಿಎಸ್ ಕೆ ಫೋಟೋಗಳನ್ನು ಡಿಲೀಸ್ ಮಾಡಿದ ರವೀಂದ್ರ ಜಡೇಜಾ: ಫ್ರಾಂಚೈಸಿಯಿಂದ ಸ್ಪಷ್ಟನೆ
ಚೆನ್ನೈ , ಶನಿವಾರ, 9 ಜುಲೈ 2022 (17:04 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಕ್ರಿಕೆಟಿಗ ರವೀಂದ್ರ ಜಡೇಜಾ ಸಂಬಂಧ ಹಳಸಿದೆ ಎಂಬ ರೂಮರ್ ಗಳು ಈ ಮೊದಲೂ ಹರಡಿತ್ತು. ಇದೀಗ ಜಡೇಜಾ ಸಿಎಸ್ ಕೆ ಜೊತೆಗಿನ ಫೋಟೋಗಳನ್ನು ಇನ್ ಸ್ಟಾಗ್ರಾಂ ಪುಟದಲ್ಲಿ ಡಿಲೀಟ್ ಮಾಡಿದ್ದಾರೆ.

ಈ ಪ್ರಕರಣ ಈಗ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಜಡೇಜಾ ಮತ್ತು ಸಿಎಸ್ ಕೆ ಸಂಬಂಧ ಹಳಸಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಅಭಿಮಾನಿಗಳು ಊಹಿಸಿದ್ದಾರೆ.

ಆದರೆ ಸಿಎಸ್ ಕೆ ಫ್ರಾಂಚೈಸಿ ಇದಕ್ಕೆ ಸ್ಪಷ್ಟನೆ ನೀಡಿದ್ದು, ಎಲ್ಲವೂ ಸರಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಮಜಾಯಿಷಿ ನೀಡಿದೆ. ಆದರೆ ಇದಕ್ಕೂ ಮೊದಲು ಜಡೇಜಾ ಇನ್ ಸ್ಟಾಗ್ರಾಂ ಫಾಲೋವರ್ ಲಿಸ್ಟ್ ನಿಂದಲೂ ಹೊರಬಂದಿದ್ದರು. ಹೀಗಾಗಿ ಇಬ್ಬರ ನಡುವೆ ಮುಸುಕಿನ ಗುದ್ದಾಟವಿರುವುದು ನಿಜ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಂಡೀಸ್ ವಿರುದ್ಧ ಟಿ20 ಸರಣಿಗೆ ಮತ್ತೆ ವಿರಾಟ್ ಕೊಹ್ಲಿಗೆ ರೆಸ್ಟ್?