ಡುಬ್ಲಿನ್: ಭಾರತದ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 33 ಎಸೆತಗಳಲ್ಲಿ 64 ರನ್ ಚಚ್ಚಿದ್ದ ಐರ್ಲೆಂಡ್ ಬ್ಯಾಟಿಗ ಹ್ಯಾರಿ ಟೆಕ್ಟರ್ ಗೆ ಈಗ ಐಪಿಎಲ್ ಅವಕಾಶ ನಿಚ್ಚಳವಾಗಿದೆ.
ವಿಶ್ವದ ಶ್ರೀಮಂತ ಕ್ರೀಡೆಯಾಗಿರುವ ಐಪಿಎಲ್ ನಲ್ಲಿ ಮುಂದಿನ ಋತುವಿನಲ್ಲಿ ಹ್ಯಾರಿ ದುಬಾರಿ ಮೊತ್ತಕ್ಕೆ ಬಿಕರಿಯಾಗುವುದು ಖಚಿತ ಎನ್ನಲಾಗುತ್ತಿದೆ.
ಮೊನ್ನೆಯ ಪಂದ್ಯದಲ್ಲಿ ಅವರ ಬ್ಯಾಟಿಂಗ್ ಗೆ ಮನಸೋತಿದ್ದ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಬ್ಯಾಟ್ ಉಡುಗೊರೆಯಾಗಿ ನೀಡಿದ್ದರು. ಹೀಗಾಗಿ ಮುಂದಿನ ದಿನಗಳಲ್ಲಿ ಅವರಿಗೆ ಐಪಿಎಲ್ ನಲ್ಲಿ ಉತ್ತಮ ಅವಕಾಶ ಸಿಗಬಹುದು ಎನ್ನಲಾಗಿದೆ.