Publish Date: Sun, 10 Jul 2022 (08:20 IST)
Updated Date: Sun, 10 Jul 2022 (09:07 IST)
ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯವಾಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಮಾಜಿ ನಾಯಕ ಎಂ.ಎಸ್ ಧೋನಿ ಸಲಹೆ ನೀಡಿದ್ದಾರೆ.
ನಿನ್ನೆಯ ಪಂದ್ಯದ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ಕಾಣಿಸಿಕೊಂಡ ಧೋನಿ ಯುವ ಆಟಗಾರರಿಗೆ ಸಲಹೆ ಸೂಚನೆ ನೀಡಿದ್ದಾರೆ.
ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಇಂಗ್ಲೆಂಡ್ ಗೆ ತೆರಳಿದ್ದ ಧೋನಿ ಕ್ರಿಕೆಟಿಗರ ಜೊತೆ ಕೆಲವು ಕಾಲ ಕಳೆದಿದ್ದಾರೆ. ಇಶಾನ್ ಕಿಶನ್ ಸೇರಿದಂತೆ ಯುವ ಕ್ರಿಕೆಟಿಗರು ಧೋನಿ ಬಳಿ ಪಾಠ ಹೇಳಿಸಿಕೊಂಡಿದ್ದಾರೆ.