ಮುಂಬೈ: ಟೆಸ್ಟ್ ಕ್ರಿಕೆಟ್ ನಲ್ಲಿ ವಿಕೆಟ್ ಗಳ ದಾಖಲೆ ಮಾಡಿರುವ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರನ್ನು ತಂಡದಿಂದ ಕೈ ಬಿಡಬಹುದಾದರೆ ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿಯನ್ನು ಯಾಕೆ ಕೈ ಬಿಡಬಾರದು?
ಹೀಗಂತ ಮಾಜಿ ನಾಯಕ ಕಪಿಲ್ ದೇವ್ ಪ್ರಶ್ನಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 450 ವಿಕೆಟ್ ಸಂಪಾದಿಸಿರುವ ಆಲ್ ರೌಂಡರ್ ಅಶ್ವಿನ್ ರಂತಹ ದಿಗ್ಗಜ ಆಟಗಾರನನ್ನು ಕೈ ಬಿಡಲು ಯಾವುದೇ ಹಿಂಜರಿಕೆಯಿಲ್ಲ ಎಂದ ಮೇಲೆ ಟಿ20 ಕ್ರಿಕೆಟ್ ನಲ್ಲಿ ಬಹಳ ದಿನಗಳಿಂದ ರನ್ ಗಳಿಸಲು ಪರದಾಡುತ್ತಿರುವ ವಿರಾಟ್ ಕೊಹ್ಲಿಯನ್ನು ಕಿತ್ತು ಹಾಕಿದರೆ ತಪ್ಪೇನು ಎಂದು ಕಪಿಲ್ ಪ್ರಶ್ನಿಸಿದ್ದಾರೆ.
ಇಂದು ನಡೆಯಲಿರುವ ಟಿ20 ಪಂದ್ಯದಲ್ಲಿ ಕೊಹ್ಲಿ ಸೇರಿದಂತೆ ಹಿರಿಯ ಕ್ರಿಕೆಟಿಗರು ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಹೀಗಾಗಿ ಯುವ ಪ್ರತಿಭೆಗಳು ಫಾರ್ಮ್ ನಲ್ಲಿಲ್ಲದ ಕೊಹ್ಲಿಗಾಗಿ ಸ್ಥಾನ ಬಿಟ್ಟುಕೊಡುವ ಬಗ್ಗೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.