Publish Date: Fri, 08 Jul 2022 (09:20 IST)
Updated Date: Fri, 08 Jul 2022 (09:44 IST)
ಮುಂಬೈ: ಸತತ ಕಳಪೆ ಪ್ರದರ್ಶನದಿಂದ ವ್ಯಾಪಕ ಟೀಕೆಗೆ ಗುರಿಯಾಗಿರುವ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಕೊಹ್ಲಿ ಸೇರಿದಂತೆ ಹಿರಿಯ ಆಟಗಾರರು ಟಿ20 ವಿಶ್ವಕಪ್ ಬಳಿಕ ಕಿರು ಮಾದರಿಯ ಕ್ರಿಕೆಟ್ ನಿಂದ ದೂರವಾಗುವ ಸಾಧ‍್ಯತೆಯಿದೆ. ಈಗಾಗಲೇ ಟೀಂ ಇಂಡಿಯಾ ಟಿ20 ಸರಣಿಗಳಲ್ಲಿ ಯುವ ಆಟಗಾರರಿಗೆ ಹೆಚ್ಚು ಅವಕಾಶ ಕೊಡುತ್ತಿದೆ.
ಹೀಗಾಗಿ ಕೊಹ್ಲಿ, ಧವನ್ ರಂತಹ ಹಿರಿಯ ಕ್ರಿಕೆಟಿಗರು ಟಿ20 ಕ್ರಿಕೆಟ್ ನಿಂದ ದೂರವಾಗುವ ಸಾಧ‍್ಯತೆಯಿದೆ. ಐಪಿಎಲ್ ನಿಂದ ಬರುವ ಯುವ ಪ್ರತಿಭೆಗಳು ಕಿರು ಮಾದರಿಯಲ್ಲಿ ಕ್ಲಿಕ್ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅವರಿಗೆ ದೀರ್ಘ ಮಾದರಿಯ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆಯಲು ವೇದಿಕೆ ಕಲ್ಪಿಸಿದಂತಾಗುತ್ತದೆ.