Select Your Language

Notifications

webdunia
webdunia
webdunia
Monday, 14 April 2025
webdunia

ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ ತಂಡ

ಭಾರತ ಮಹಿಳಾ ಕ್ರಿಕೆಟ್
ಪಲ್ಲಿಕ್ಕೆಲೆ , ಗುರುವಾರ, 7 ಜುಲೈ 2022 (17:03 IST)
ಪಲ್ಲಿಕ್ಕೆಲೆ: ಶ್ರೀಲಂಕಾ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಮಹಿಳಾ ಕ್ರಿಕೆಟ್ ತಂಡ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು. ಶಫಾಲಿ ವರ್ಮ 49, ಯಶಿಕಾ ಭಾಟಿಯಾ 30, ನಾಯಕಿ ಹರ್ಮನ್ ಪ್ರೀತ್ ಕೌರ್ 75, ಪೂಜಾ ವಸ್ತ್ರಾಕರ್ 56 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಲಂಕಾ 47.3 ಓವರ್ ಗಳಲ್ಲಿ 216 ರನ್ ಗಳಿಗೆ ಆಲೌಟ್‍ ಆಯಿತು. ಚಮರಿ ಅತ್ತಪಟ್ಟು 44, ನಿಲಕಶಿ ಡಿ ಸಿಲ್ವ 48 ರನ್ ಗಳಿಸಿದರು. ಭಾರತದ ಪರ ಕನ್ನಡತಿ ರಾಜೇಶ್ವರಿ ಗಾಯಕ್ ವಾಡ್ 3, ಮೇಘನಾ ಸಿಂಗ್ ಮತ್ತು ಪೂಜಾ ವಸ್ತ್ರಾಕರ್ ತಲಾ 2  ಹಾಗೂ ದೀಪ್ತಿ ಶರ್ಮಾ, ಹರ್ಮನ್ ಪ್ರೀತ್ ಕೌರ್ ಮತ್ತು ಹರ್ಲಿನ್ ಡಿಯೊಲ್ ತಲಾ 1 ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಓಂ ಹೆಲಿಕಾಪ್ಟ್ರೇಯ ನಮಃ! ಧೋನಿಗೆ ಸೆಹ್ವಾಗ್ ಸ್ಪೆಷಲ್ ಬರ್ತ್ ಡೇ ವಿಶ್